ಆರ್ಟಿಕಲ್ 370 ರದ್ದು ವಿಚಾರ ಮತ್ತು ದಸರಾ ತಯಾರಿ ವಿಳಂಬ ಕುರಿತು ರಾಜವಂಶಸ್ಥ ಯದುವೀರ್ ಪ್ರತಿಕ್ರಿಯಿಸಿದ್ದು ಹೀಗೆ…?

ಮೈಸೂರು,ಆ,6,2019(www.justkannada.in):  ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ದು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ  ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸರ್ಕಾರದ ಈ ದಿಟ್ಟ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ಇದೊಂದು ಭಾರತಕ್ಕೆ ಐತಿಹಾಸಿಕ ಕ್ಷಣ ಎಂದಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ರಾಜವಂಶಸ್ಥ ಯದುವೀರ್, ಭಾರತದ ಏಕತೆಗೆ ನಾವೆಲ್ಲ ಬದ್ದರಾಗಿರಬೇಕು. ಕೇಂದ್ರ ಸರ್ಕಾರದ ಈ ದಿಟ್ಟ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ. ಈ ಒಂದು ತೀರ್ಮಾನದಿಂದ ಕಾಶ್ಮೀರಕ್ಕೆ ಹಾಗೂ ಭಾರತಕ್ಕೆ ಅಭಿವೃದ್ದಿಯಾಗಲಿ.ಇನ್ನೂ ಮುಂದೆ ಕಾಶ್ಮೀರದಲ್ಲಿ ಶಾಂತಿ ನೆಲಸಲಿ ಎಂದು ನುಡಿದರು.

ದಸರಾ ತಯಾರಿ ವಿಳಂಭ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಯದುವೀರ್, ಈ ಬಗ್ಗೆ ಸರ್ಕಾರವನ್ನೇ ಕೇಳಬೇಕು. ನಮ್ಮ ಅರಮನೆಯಲ್ಲಿ ದಸರಾ ಹೇಗೆ ನಡೆಯಬೇಕೋ ಆ ತಯಾರಿ ನಡೆಯುತ್ತಿದೆ ಎಂದರು.

ಇನ್ನು ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ‌. ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳಲು ಇಷ್ಟ ಪಡುತ್ತೇನೆ ಎಂದು ಯದುವೀರ್ ತಿಳಿಸಿದರು.

Key words: mysore-  Yaduveer –reaction- cancellation – Article 370 – delay -preparation -Dasara.