ಮೈಸೂರು ವಿವಿ; ಚೀನಾ ವಿದ್ಯಾರ್ಥಿಗಳು ಪಿಜಿ ಪರೀಕ್ಷೆ ಬರೆಯಲು ‘ ಇವು’ ಕಡ್ಡಾಯ..!

 

ಮೈಸೂರು, ಜೂ.03, 2020 : (www.justkannada.in news) : ಚೀನಾದ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಮನವಿ ಮೇರೆಗೆ ಮೈಸೂರು ವಿಶ್ವವಿದ್ಯಾನಿಲಯ, ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷೆಯನ್ನು ನಿಗಧಿತ ಅವಧಿಗೂ ಮುಂಚಿತವಾಗಿಯೇ ಆರಂಭಿಸಿದೆ

ಮೈಸೂರು ವಿವಿಯಲ್ಲಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ( MSc in Information Technology ) ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ನೂರಕ್ಕೂ ಹೆಚ್ಚು ವಿದೇಶಿ (ಚೀನಾ) ವಿದ್ಯಾರ್ಥಿಗಳಿಗೆ ಜೂ. 01 ರಿಂದಲೇ ಪರೀಕ್ಷೆಗಳು ಆರಂಭಗೊಂಡಿದ್ದು, ಇಂದಿಗೆ ಮೂರು ಪತ್ರಿಕೆಗಳು ಮುಗಿದಿದೆ. ಉಳಿದವು ಜೂ.06ಕ್ಕೆ ಪೂರ್ಣಗೊಳ್ಳಲಿದೆ.

ಮೈಸೂರು ವಿಶ್ವವಿದ್ಯಾನಿಲಯದ ವಿದೇಶಿ ವಿದ್ಯಾರ್ಥಿಗಳ ಕೇಂದ್ರದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಕೋವಿಡ್ 19 ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ವಿದ್ಯಾರ್ಥಿ ನಡುವೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ. ಜತೆಗೆ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದು ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದರು.

mysore-university-china-students-PG.-exams-started-UOM

ಪ್ರತಿ ನಿತ್ಯ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರ ವರೆಗೆ ಹಾಗೂ ಮತ್ತೆ ಊಟದ ವಿರಾಮದ ಬಳಿಕ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯ ತನಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಚೀನಾ ವಿದ್ಯಾರ್ಥಿಗಳಿಗೆ ಜೂ. 15 ರಿಂದ ಪರೀಕ್ಷೆಗಳು ನಿಗಧಿಯಾಗಿದ್ದವು. ಆದರೆ ಚೀನಾದ ರಾಯಭಾರಿ ಕಚೇರಿ ಸೂಚನೆ ಹಾಗೂ ಅಲ್ಲಿನ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಮನವಿ ಮೇರೆಗೆ ಪರೀಕ್ಷೆಗಳನ್ನು 10 ದಿನ ಮೊದಲೇ ನಡೆಸಲು ಮೈಸೂರು ವಿವಿ ತೀರ್ಮಾನಿಸಿತ್ತು.
ಇದೀಗ ಜೂ. 1 ರಿಂದ ಆರಂಭಗೊಂಡು ಜೂ. 6 ಕ್ಕೆ ಇನ್ಫಾರ್ಮೇಷನ್ ಟೆಕ್ನಾಲಜಿ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆ ( ಚೀನಾ ವಿದ್ಯಾರ್ಥಿಗಳಿಗೆ ಮಾತ್ರ ) ಪೂರ್ಣಗೊಳ್ಳಲಿದೆ. ಬಳಿಕ ಜೂ. 7 ಮತ್ತು 8 ರಂದು ಈ ವಿದ್ಯಾರ್ಥಿಗಳು ಮೈಸೂರಿಂದ ಚೀನಾಗೆ ಮರಳುವರು.

mysore-university-china-students-PG.-exams-started-UOM

ooooo

key words : mysore-university-china-students-PG.-exams-started-UOM
————