ಕರೊನಾ ವೈರಸ್ ಭೀತಿ ಹಿನ್ನೆಲೆ: ಕ್ವಾರಂಟೈನ್ ಅವಧಿ ವಿಸ್ತರಣೆ  ಮಾಡಿದ ಆರೋಗ್ಯ ಇಲಾಖೆ

ಬೆಂಗಳೂರು,ಜೂ,3,2020(www.justkannada.in): ರಾಜ್ಯದಲ್ಲಿ ದಿನೇ ದಿನೇ ಮಹಾಮಾರಿ ಕರೊನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದು ಈ ಹಿನ್ನೆಲೆ ಆರೋಗ್ಯ ಇಲಾಖೆ ಕ್ವಾರಂಟೈನ್ ಅವಧಿ ವಿಸ್ತರಣೆ ಮಾಡಿದೆ.

ರಾಜ್ಯದಲ್ಲಿ ಮಹಾರಾಷ್ಟ್ರದಿಂದ ಬಂದವರಿಂದಲೇ ಅತಿಹೆಚ್ಚು ಕೊರೋನಾ ಪ್ರಕರಣ ಪತ್ತೆಯಾಗಿದ್ದು ಹೀಗಾಗಿ  ಮಹಾರಾಷ್ಟ್ರ ರಾಜ್ಯದಿಂದ ಆಗಮಿಸುವವರಿಗೆ ಕ್ವಾರಂಟೈನ್ ಅವಧಿ ವಿಸ್ತರಣೆ ಮಾಡಲಾಗಿದೆ. 21 ದಿನಗಳವರೆಗೆ ಕ್ವಾರಂಟೈನ್ ಅವಧಿಯನ್ನು ಏರಿಕೆ ಮಾಡಿ ಸರ್ಕಾರ ಆದೇಶಿಸಿದೆ.coronavirus-health-department-extended-quarantine

ಮಹಾರಾಷ್ಟ್ರದಿಂದ ಬಂದವರಿಗೆ  7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಮತ್ತು 14 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ. ಈ ಹಿಂದೆ ಕ್ವಾರೆಂಟೈನ್ ಅವಧಿ14 ದಿನಗಳವರೆಗಿತ್ತು. ರಾಜ್ಯದಲ್ಲಿ ಕಂಡುಬರುತ್ತಿರುವ ಪ್ರಕರಣಗಳ ಪೈಕಿ ಬಹುತೇಕ ಪ್ರಕರಣಗಳಿಗೆ ಮಹಾರಾಷ್ಟ್ರ ಲಿಂಕ್ ಹಿನ್ನೆಲೆ, ಕ್ವಾರಂಟೈನ್ ಅವಧಿ ಹೆಚ್ಚಳ ಮಾಡಿ  ಸರ್ಕಾರ ಆದೇಶ ಹೊರಡಿಸಿದೆ.

Key words: coronavirus -Health Department -extended -Quarantine