ಮೈಸೂರಿನಲ್ಲಿ  ಜು,28 ರಂದು ಸಂಗೀತದ ಮೂಲಕ ಆರೋಗ್ಯ ಥೆರೆಪಿ…..

ಮೈಸೂರು,ಜು,23,2019(www.justkannada.in): ಇದೆ  ಜುಲೈ 28ರ ಭಾನುವಾರ ಸಂಜೆ ಕಲಾಮಂದಿರದಲ್ಲಿ ಉನ್ನತಿ ಸಂಸ್ಥೆಯಿಂದ ಉತ್ತಮ ಜೀವನಕ್ಕೆ ರಾಗ ಚಿಕಿತ್ಸೆ ಕುರಿತಾದ ಕಾರ್ಯಕ್ರಮ  ಆಯೋಜಿಸಲಾಗಿದೆ.

‘ರಾಗರೋಗ್ಯ’  ಹೆಸರಿನಡಿ ಒಂದೇ ವೇದಿಕೆಯಲ್ಲಿ ಸಂಗೀತದ  ಮೂಲಕ ವಿವಿಧ ಕಾಯಿಲೆಗಳಿಗೆ ಪ್ರಾಯೋಗಿಕವಾಗಿ ಥೆರಫಿ  ಮಾಡಲಾಗುತ್ತದೆ. ಇದೆ ವೇದಿಕೆಯಲ್ಲಿ ಅನೇಕ ರೋಗಗಳಿಗೆ ರಾಮಬಾಣ ಸಿರಿಧಾನ್ಯಗಳ ಆಹಾರ ಕುರಿತು  ಆಹಾರ ಕೃಷಿ ಮತ್ತು ಹೋಮಿಯೋ ತಜ್ಞ ಡಾ.ಖಾದರ್ ವಲಿ ಅವರು ಸಲಹೆ ನೀಡಲಿದ್ದಾರೆ.   ಜೊತೆಗೆ ಯಾವ ಯಾವ ರೋಗಗಳಿಗೆ ಯಾವ ಪದ್ದತಿಯ  ಸಂಗೀತ ಪ್ರಕಾರಗಳು ಸಹಕಾರಿಯಾಗಲಿದೆ ಎಂಬ ಮಾಹಿತಿಯನ್ನ ಗಾಯನದ ಮೂಲಕ ಮೈಸೂರಿನ ಗಾಯಕರುಗಳಾದ ರೂಪಶ್ರೀ ಮತ್ತು ಶ್ರೀ ಹರ್ಷ ನೀಡಲಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮೈಸೂರಿನ ಗಾಯಕರುಗಳಾದ ರೂಪಶ್ರೀ ಮತ್ತು ಶ್ರೀ ಹರ್ಷ ಮಾಹಿತಿ ನೀಡಿದರು.  ಅಂದು ಸಂಜೆ 6 ಗಂಟೆಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮ ಉದ್ಘಾಟಿಸಲಿದ್ದು , ಪ್ರವೇಶ ಉಚಿತವಾಗಿರುತ್ತದೆ ಎಂದು ಪತ್ರಿಕಾಘೋಷ್ಠಿಯಲ್ಲಿ ಗಾಯಕಿ  ರೂಪಶ್ರೀ ತಿಳಿಸಿದರು.

Key words: Health -Therapy -Music – June 28- Mysore.