Saturday, August 15, 2026

BDA Apartments

Home Front Page ಏಕದಿನ ಕ್ರಿಕೆಟ್’ಗೆ ನಿವೃತ್ತಿ: ಲಸಿತ್ ಮಾಲಿಂಗ ನಿರ್ಧಾರ

ಏಕದಿನ ಕ್ರಿಕೆಟ್’ಗೆ ನಿವೃತ್ತಿ: ಲಸಿತ್ ಮಾಲಿಂಗ ನಿರ್ಧಾರ

ಕೊಲಂಬೊ, ಜುಲೈ 23, 2019 (www.justkannada.in): ಶ್ರೀಲಂಕಾ ಕ್ರಿಕೆಟ್ ತಂಡದ ವೇಗದ ಬೌಲರ್ ಲಸಿತ್ ಮಾಲಿಂಗ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಸಜ್ಜಾಗಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟಿಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಶ್ರೀಲಂಕಾ ತಂಡದ ನಾಯಕ ದಿಮುತ್‌ ಕರುಣಾರತ್ನೆ ಖಚಿತಪಡಿಸಿದ್ದಾರೆ.

ಕೊಲಂಬೊದ ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ಜುಲೈ 26, 28 ಮತ್ತು 31ರಂದು ನಡೆಯಲಿರುವ ಸರಣಿಗೆ ಪ್ರಕಟಿಸಲಾದ 22 ಸದಸ್ಯರ ಶ್ರೀಲಂಕಾ ತಂಡದಲ್ಲಿ ಮಾಲಿಂಗ ಸ್ಥಾನ ಪಡೆದಿದ್ದಾರೆ.