ಚಿರಂಜೀವಿ ಕುಟುಂಬದ ಕುಡಿ ವರುಣ್ ತೇಜ್ ಸಿನಿಮಾದಲ್ಲಿ ಉಪ್ಪಿ

ಬೆಂಗಳೂರು, ಸೆಪ್ಟೆಂಬರ್ 21, 2020 (www.justkannada.in): ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದ ಕುಡಿ ವರುಣ್ ತೇಜ್ ಅವರ ವಿಟಿ10 ಸಿನಿಮಾದಲ್ಲಿ ನಟ ಉಪೇಂದ್ರ ನಟಿಸುತ್ತಿದ್ದಾರೆ.

ಹೌದು. ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ಬಹಿರಂಗಗೊಂಡಿದೆ.

ಉಪೇಂದ್ರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ನಟ ವರುಣ್, ನಿಮ್ಮೊಂದಿಗೆ ನಟಿಸಲು ಕಾತುರನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಆ ಮೂಲಕ ಉಪೇಂದ್ರ ಅವರು ತೆಲುಗಿನಲ್ಲಿ ನಟಿಸುತ್ತಿರುವ ವಿಚಾರ ಬಹಿರಂಗಗೊಂಡಿದೆ.