ಮೈಸೂರು ತಾಲ್ಲೂಕು ಪಂಚಾಯತ್ ಸಾಮಾನ್ಯ ಸಭೆ ಬಹಿಸ್ಕರಿಸಿ ಹೊರನಡೆದ ಸದಸ್ಯರು….

ಮೈಸೂರು,ಫೆ,29,2020(www.justkannada.in): ಯಾವುದೇ ಸ್ಥಾಯಿ ಸಮಿತಿ ಸಭೆಗಳಿಗೆ  ಸದಸ್ಯರಿಗೆ ಆಹ್ವಾನ ನೀಡದ ಹಿನ್ನೆಲೆ ಮೈಸೂರು ತಾಲ್ಲೂಕು ಪಂಚಾಯತ್ ಸದಸ್ಯರು  ಸಾಮಾನ್ಯ ಸಭೆಯನ್ನ ಬಹಿಷ್ಕರಿಸಿ ಹೊರಬಂದ ಘಟನೆ ನಡೆಯಿತು.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಸಲಾಗಿತ್ತು. ಇದೇ ವೇಳೆ ತಾ.ಪಂ ಅಧ್ಯಕ್ಷೆ ಕಾಳಮ್ಮ ಹಾಗೂ ಇ ಓ ಕೃಷ್ಣಕುಮಾರ್ ವಿರುದ್ಧ ಸದಸ್ಯರು ಅಕ್ರೋಶ ವ್ಯಕ್ತಪಡಿಸಿದರು. ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.

ಈ ವೇಳೆ ಮಾತನಾಡಿದ  ತಾಲೂಕು ಪಂಚಾಯತ್ ಉಪಾಧ್ಯಕ್ಷ  ಮಂಜು, ಯಾವುದೇ ಸ್ಥಾಯಿ ಸಮಿತಿ ಸಭೆಗಳಿಗೆ ಸದಸ್ಯರನ್ನು ಅಹ್ವಾನ ಮಾಡಲ್ಲ. ಪಂಚಾಯತ್ ಯಲ್ಲಿ ಸದಸ್ಯರಿಗೆ ಸ್ವಲ್ಪವೂ ಬೆಲೆ ಇಲ್ಲ. ಉಪಾಧ್ಯಕ್ಷ ರನ್ನು ಕೂಡ ಗಣನೆ ತೆಗೆದುಕೊಳ್ಳವುದಿಲ್ಲ. ಅಧಿಕಾರಿಗಳು ಹಾಗೂ ಅಧ್ಯಕ್ಷರೇ ಅಡಳಿತ ನಡೆಸುತ್ತಿದ್ದಾರೆ. ಬಡಾವಣೆಗಳ  ವಿಚಾರ ಬಂದ್ರೆ ತಾವೇ ನಿರ್ಧಾರ ಮಾಡುತ್ತಾರೆ. ತಾಲೂಕು ಪಂಚಾಯತ್ ಯಲ್ಲಿ ಅಡಳಿತ ಸತ್ತು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯರ ಬಹಿಷ್ಕಾರ ಹಿನ್ನೆಲೆ ಸಾಮನ್ಯ ಸಭೆ ಗೂಂದಲದ ಗೂಡಾಗಿ ಮಾರ್ಪಟ್ಟಿತು.

Key words: Members -Mysore -Taluk Panchayat -General –meeting-boycotted