Thursday, July 30, 2026

BDA Apartments

Home Front Page ಅಪಾರ್ಟ್‌ಮೆಂಟ್‌ ಗಳಲ್ಲಿ ಸೌರಶಕ್ತಿ ಫಲಕ ಅಳವಡಿಕೆ ಉತ್ತಮ ಪ್ರಯತ್ನ- ಡಿಸಿಎಂ ಡಾ. ಅಶ್ವತ್ಥನಾರಾಯಣ್…

ಅಪಾರ್ಟ್‌ಮೆಂಟ್‌ ಗಳಲ್ಲಿ ಸೌರಶಕ್ತಿ ಫಲಕ ಅಳವಡಿಕೆ ಉತ್ತಮ ಪ್ರಯತ್ನ- ಡಿಸಿಎಂ ಡಾ. ಅಶ್ವತ್ಥನಾರಾಯಣ್…

ಬೆಂಗಳೂರು,ಫೆ,29,2020(www.justkannada.in):  ಎಲ್ಲ ಮನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳ ಮೇಲೆ ಸೌರ ಫಲಕ ಅಳವಡಿಕೆ ಉತ್ತಮ ಕ್ರಮ, ಇಂಥ ಪರಿಸರ ಸ್ನೇಹಿ ನಡೆ ಎಲ್ಲರಿಗೂ ಮಾದರಿ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಮಲ್ಲೇಶ್ವರದ ರಿನೇನಾಸ್ಸ್‌ ಅಪಾರ್ಟ್‌ಮೆಂಟ್‌ ನಿವಾಸಿಗಳು ಸೂರಿನ ಮೇಲೆ ಅಳವಡಿಸಿರುವ 45 ಕಿಲೋ ವ್ಯಾಟ್‌ ಸಾಮರ್ಥ್ಯದ  ಸೌರ ಫಲಕವನ್ನು ಶನಿವಾರ ಉದ್ಘಾಟಿಸಿ ಡಾ.ಅಶ್ವತ್ಥನಾರಾಯಣ ಮಾತಾಡಿದರು.

“ಖಾಸಗಿ ವಸತಿ ಸಮುಚ್ಛಯದಲ್ಲಿ ನಿರ್ಮಿಸಿರುವ ರೂಫ್‌ಟಾಪ್‌ ಸೋಲಾರ್‌ ಪ್ಯಾನೆಲ್‌ ಪರಿಸರ ಸ್ನೇಹಿಯಾಗಿದ್ದು, ಇತರರಿಗೂ ಮಾದರಿಯಾಗಿದೆ.  ರಿನೇಸಾನ್ಸ್‌ ಅಪಾರ್ಟ್‌ಮೆಂಟ್‌ನವರು ಈ ಉತ್ತಮ ಪ್ರಯತ್ನ ಮಾಡಿದ್ದಾರೆ. ಸ್ಥಳದ ಉತ್ತಮ ಬಳಕೆ ಆಗಿದೆ. ನಿವಾಸಿಗಳೇ ಬಂಡವಾಳ ಹೂಡಿ ನಿರ್ಮಿಸಿರುವ ಸೌರ ಫಲಕ ಇದಾಗಿದ್ದು, ನಗರದಲ್ಲಿ ಇಂಥ ಮೊದಲ ಪ್ರಯತ್ನ ಇದು.   ಸೌರ ಫಲಕ ಅಳವಡಿಕೆ ಕುರಿತ ಕಾನೂನು ಈ ಹಿಂದೆ ದುರ್ಬಳಕೆಯಾಗಿತ್ತು. ಹಾಗಾಗಿ ಈಗ ಬೇರೆಯವರು ಅಳವಡಿಕೆ ಮಾಡುವಂತಿಲ್ಲ. ಹಾಗಾಗಿದ್ದರೆ ಬಳಕೆದಾರರ ಖರ್ಚು ಕಡಿಮೆ ಆಗುತ್ತಿತ್ತು. ಆದರೂ, ಈ ಪ್ರಯತ್ನ ಶ್ಲಾಘನೀಯ” ಎಂದು ಅವರು ಹೇಳಿದರು.

Key words: Installing -solar panels – apartments – good-DCM -Dr. Ashwaththanarayan.