Tuesday, October 13, 2026

Dasara Wishes

Happy Dasara
Home Cinema ಕಾಂತಾರ ಮೆಚ್ಚಿ ರಿಷಬ್’ಗೆ ಪತ್ರ ಬರೆದ ಕಿಚ್ಚ !

ಕಾಂತಾರ ಮೆಚ್ಚಿ ರಿಷಬ್’ಗೆ ಪತ್ರ ಬರೆದ ಕಿಚ್ಚ !

ಬೆಂಗಳೂರು, ಅಕ್ಟೋಬರ್ 08, 2022 (www.justkannada.in): ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರ ನೋಡಿದ ನಟ ಕಿಚ್ಚ ಸುದೀಪ್ ಪತ್ರವೊಂದನ್ನು ಬರೆದಿದ್ದಾರೆ.

ಹೌದು. ನಟ ಸುದೀಪ್ ಕಾಂತಾರ ಚಿತ್ರವನ್ನು ನೋಡಿರುವುದಷ್ಟೇ ಅಲ್ಲ, ಅದನ್ನು ಇಷ್ಟಪಟ್ಟು ಸೋಷಿಯಲ್ ಮೀಡಿಯಾದಲ್ಲಿ ಒಂದು ಪತ್ರವನ್ನೇ ಬರೆದಿದ್ದಾರೆ.ಕಾಂತಾರ ಮೆಚ್ಚಿ ರಿಷಬ್’ಗೆ ಪತ್ರ ಬರೆದ ಕಿಚ್ಚ ! sudeep

ಕೆಲವು ಸಿನಿಮಾಗಳು ಚೆನ್ನಾಗಿರುತ್ತವೆ, ಕೆಲವು ಅದ್ಭುತವಾಗಿರುತ್ತವೆ. ಬಹಳ ಅಪರೂಪಕ್ಕೆ ಕೆಲವು ಚಿತ್ರಗಳನ್ನು ನೋಡಿ ನಮ್ಮ ಬಾಯಿಂದ ಮಾತೇ ಹೊರಡದಂತೆ ಆಗುತ್ತವೆ ಎಂದು ಕಾಂತಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಂತಾರ ಅತ್ಯದ್ಭುತ ಚಿತ್ರ. ಒಂದು ಸರಳವಾದ ಕಥೆ, ಒಳ್ಳೆಯ ಚಿತ್ರಕಥೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದ್ಭುತವಾದ ನಿರೂಪಣೆ ಈ ಚಿತ್ರದ ಜೀವಾಳ. ಇನ್ನು, ರಿಷಭ್ ಶೆಟ್ಟಿ ತಮ್ಮ ಅದ್ಭುತ ಅಭಿನಯದಿಂದ ನಮ್ಮ ಮನಸ್ಸನ್ನು ತಟ್ಟುತ್ತಾರೆ ಎಂದು ಹೊಗಳಿದ್ದಾರೆ.