ಒಟಿಟಿಯಲ್ಲಿ ದಾಖಲೆ ಬರೆದ ಭಟ್ಟರ ಗಾಳಿಪಟ-2

ಬೆಂಗಳೂರು, ಅಕ್ಟೋಬರ್ 08, 2022 (www.justkannada.in): ಯೋಗರಾಜ್ ಭಟ್ ಅವರ ಗಾಳಿಪಟ 2 ಸಿನಿಮಾ ಒಟಿಟಿಯಲ್ಲಿ ಸೂಪರ್ ಹಿಟ್ ಆಗಿದೆ.

ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಅಭಿನಯದ ಗಾಳಿಪಟ-2 ಸಿನಿಮಾ ಥಿಯೇಟರ್​ ನಲ್ಲಿಯೂ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಇದೀಗ ಝೂ-5 ಮೂಲಕ ಒಟಿಟಿಯಲ್ಲಿ ರಿಲೀಸ್ ಆಗಿದ್ದು, ದಾಖಲೆ ಬರೆದಿದೆ.

ಈ ಗಾಳಿಪಟ-2 ಈಗ ಒಟಿಟಿಯಲ್ಲಿ ಭಾರಿ ದಾಖಲೆ ಬರೆದಿದೆ. ಕೇವಲ 48 ಗಂಟೆಯಲ್ಲಿ ಗಾಳಿಪಟ-2 ನಿರೀಕ್ಷೆ ಮಟ್ಟವನ್ನ ಮೀರಿ ರೆಸ್ಪಾನ್ಸ್ ಪಡೆದಿದೆ.

ಳೆದ ಆಗಸ್ಟ್ ತಿಂಗಳ 12 ರಂದು ರಿಲೀಸ್ ಆಗಿತ್ತು.ರಾಜ್ಯದೆಲೆಡೆ ಈ ಸಿನಿಮಾ ತನ್ನದೇ ರೀತಿಯಲ್ಲಿ ಗಮನ ಸೆಳೆದಿತ್ತು. ಪ್ರೇಕ್ಷಕರನ್ನ ವಿಶೇಷವಾಗಿಯೇ ರಂಜಿಸಿತ್ತು.