ಪ್ರಸಕ್ತ ಸಾಲಿನ ಕಬ್ಬಿನ ದರ ನಿಗದಿಗೆ ಆಗ್ರಹ: ಜು.4 ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ- ಕುರುಬೂರು ಶಾಂತಕುಮಾರ್.

ಮೈಸೂರು,ಜುಲೈ,2,2022(www.justkannada.in): ಪ್ರಸಕ್ತ ಸಾಲಿನ ಕಬ್ಬಿನ ದರ ನಿಗದಿ ಮಾಡುವಂತೆ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ  ಇಂದು ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಕುರುಬೂರು ಶಾಂತಕುಮಾರ್, ಈಗಾಗಲೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಇನ್ನೂ ಕಬ್ಬು ದರ ನಿಗದಿ ಮಾಡಿಲ್ಲ. ಹಾಗಾಗಿ ಧರಣಿ ಮಾಡಲು ಸಂಘಟನೆ ನಿರ್ಧಾರ ಮಾಡಿದೆ. ಜುಲೈ4 ರಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನೆ ಮಾಡಲಾಗುವುದು. ಜುಲೈ 5 ರಂದು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಉತ್ತರ ಪ್ರದೇಶದಲ್ಲಿ ಎಸ್ ಎಪಿ ಬೆಲೆಯನ್ನ 3500 ನಿಗದಿ ಮಾಡಿದ್ದಾರೆ.ಅದೇ ಮಾನದಂಡದಂತೆ ನಮಗೂ ಕಬ್ಬಿನ ದರ ನಿಗದಿ ಮಾಡಬೇಕು. ಕಬ್ಬು ಕಾರ್ಖಾನೆಗಳು , ಇಳುವರಿ ಹಾಗೂ ತೂಕದಲ್ಲಿ ಮೋಸ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಕಬ್ಬುದರ ನಿಗದಿ ಮಾಡಬೇಕು. ಕಬ್ಬು ಕಟಾವು ಮತ್ತು ಸಾಗಣಿಕೆ ವೆಚ್ಚ ಹೆಚ್ಚಾದ್ದರಿಂದ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ತಕ್ಷಣ ದರ ನಿಗದಿ ಮಾಡದಿದ್ದರೆ ಹಣ ನೀಡುವುದು ವಿಳಬವಾಗಿ ರೈತರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಕಾರ್ಖಾನೆಗಳು ಕೂಲಿ ಕಾರ್ಮಿಕರನ್ನು ಮುಂಗಡವಾಗಿ ಬುಕ್ ಮಾಡಿಕೊಂಡಿವೆ. ರೈತರ ಹೊಲದಲ್ಲಿನ ದರ ನಿಗದಿ ಆಗಬೇಕು. ಕಬ್ಬಿನ ಉತ್ಪನ್ನಗಳ ಲಾಭವನ್ನು ರೈತರಿಗ ಶೀಘ್ರದಲ್ಲೇ ನೀಡಬೇಕು ಎಂದು ಆಗ್ರಹಿಸಿದರು.special-package-announcement-cm-bs-yeddyurappa-farmer-leader-kuruburu-shanthakumar

ಕೇಂದ್ರ ಸರ್ಕಾರ ಶ್ರೀರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದಿದೆ. ಕೇಂದ್ರ ಸರ್ಕಾರ ಜೂಜುಕೋರರಿಗೆ ಜಿಎಸ್ ಟಿ ವಿಧಿಸಿಲ್ಲ. ಕ್ಯಾಸಿನೋಗಳಿಗೆ ಜಿಎಸ್ ಟಿ ವಿಧಿಸಿಲ್ಲ. ಆದರೆ ಬಡವರ ಉತ್ಪಾದನೆ ಮಾಡುವ ಮೊಸರು, ಮಜ್ಜಿಗೆ, ಹಾಲು ಕರೆಯುವ ಯಂತ್ರಕ್ಕೆ ಜಿಎಸ್ ಟಿ ಹಾಕಲಾಗುತ್ತಿದೆ. ಕೂಡಲೇ ಸರ್ಕರ ಜಿಎಸ್ ಟಿ ರದ್ದು ಮಾಡುವಂತೆ ಕುರುಬೂರ್ ಶಾಂತಕುಮಾರ್ ಒತ್ತಾಯಿಸಿದರು.

ಕನ್ನಯ್ಯಲಾಲ್‌ ಹತ್ಯೆ ವಿಚಾರ ‌ಕುರಿತು ಪ್ರತಿಕ್ರಿಯಿಸಿದ ಕುರುಬೂರು ಶಾಂತ ಕುಮಾರ್,  ಕನ್ನಯ್ಯಲಾಲ್ ಹತ್ಯೆ ಖಂಡಿನೀಯ. ಇದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಎಚ್ಚೆತ್ತುಕೊಳ್ಳಬೇಕು. ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

Key words: Demand – sugarcane- price- fixing-Kuruburu Shanthakumar.