ಕೊರೋನಾ ಪಾಸಿಟಿವ್ ಆದರೂ ಶಾಸಕ ರಾಮದಾಸ್  ಕಾರ್ಯಕ್ರಮದಲ್ಲಿ ಭಾಗಿ: ಸಚಿವರು,ಶಾಸಕರು ಮುಖಂಡರಲ್ಲಿ ಆತಂಕ…

ಮೈಸೂರು,ಏಪ್ರಿಲ್,14,2021(www.justkannada.in): ಬಿಜೆಪಿ ಶಾಸಕ ರಾಮದಾಸ್ ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.  ಆದರೂ ಸಹ ಇಂದು ಶಾಸಕ ರಾಮದಾಸ್ ಸಭೆ ಸಮಾರಂಭದಲ್ಲಿ ಪಾಲ್ಗೊಂಡಿದ್ದು ಇದರಿಂದಾಗಿ ಸಚಿವ ಮತ್ತು ಶಾಸಕರು, ಮುಖಂಡರಲ್ಲಿ ಆತಂಕ ಎದುರಾಗಿದೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ಕೊರೋನಾ ಸೋಂಕು ದೃಢಪಟ್ಟ ನಂತರ ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು. ಅಥವಾ ಹೋಂ ಐಸೋಲೇಷನ್ ನಲ್ಲಿರಬೇಕು. ಆದರೆ ಶಾಸಕ ರಾಮದಾಸ್ ಕೊರೋನಾ ಪಾಸಿಟಿವ್ ಕಂಡು ಬಂದರೂ ಸಹ ಇಂದು ಮೈಸೂರಿನಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಶಾಸಕ ರಾಮದಾಸ್ ಗೆ ಸೋಂಕಿನ ಲಕ್ಷಣ ಕಂಡು ಬಂದಿತ್ತು. ಹೀಗಾಗಿ ಪರೀಕ್ಷೆಗಾಗಿ ಸ್ಯಾಂಪಲ್ ನೀಡಿದ್ದರು. ಇದೀಗ ಶಾಸಕ ರಾಮದಾಸ್ ಸಭೆ ಸಮಾರಂಭಗಳಲ್ಲಿ ಪಾಲ್ಗೊಂಡ ನಂತರ ವರದಿ ಬಂದಿದ್ದು , ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.Corona – positive- MLA- Ramdas – program-  Anxiety - ministers

ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಶಾಸಕ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ರಾಜೀವ್, ಸಂಸದ ಪ್ರತಾಪ್ ಸಿಂಹ, ಮೇಯರ್ ರುಕ್ಮಿಣಿ ಮಾದೇಗೌಡ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಇದೀಗ ಆತಂಕ  ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Key words: Corona – positive- MLA- Ramdas – program-  Anxiety – ministers