ಬನಾರಸ್ ರೇಷ್ಮೆ ಸೀರೆ ನೇಕಾರರ ಭೇಟಿ: ಕರ್ನಾಟಕದ ರೇಷ್ಮೆ ಖರೀದಿಸುವಂತೆ ಸಚಿವ ಡಾ‌. ನಾರಾಯಣಗೌಡ ಮನವಿ.

ವಾರಣಾಸಿ,ನವೆಂಬರ್,19,2021(www.justkannada.in):  ವಾರಣಾಸಿ ಪ್ರವಾಸದಲ್ಲಿರುವ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಇಂದು ನೇಕಾರರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಬನರಾಸ್ ಸೀರೆ ನೇಯ್ಗೆಗೆ ಹೆಸರುವಾಸಿಯಾದ ಲಲ್ಲಾಪುರ ಪ್ರದೇಶಕ್ಕೆ ಸಚಿವ ನಾರಾಯಣಗೌಡ ಭೇಟಿ ನೀಡಿ, ನೇಕಾರರ ಜೊತೆ ಮಾತುಕತೆ ನಡೆಸಿದರು. ರೇಷ್ಮೆ ಖರೀದಿ ಸೇರಿದಂತೆ ನೇಕಾರರ ಸಮಸ್ಯೆ ಹಾಗೂ ಅಭಿಪ್ರಾಯವನ್ನು ಕೇಳಿದರು. ಅಲ್ಲದೇ ಕರ್ನಾಟಕ ರೇಷ್ಮೆ ಮಾರುಕಟ್ಟೆಯನ್ನು ವಾರಣಾಸಿಯಲ್ಲಿ ಆರಂಭಿಸುತ್ತಿರುವ ಬಗ್ಗೆ ಮಾಹಿತಿ ನೀಡಿ ಉತ್ತಮ ಗುಣಮಟ್ಟದ ರೇಷ್ಮೆ ಒದಗಿಸುವುದಾಗಿ ಭರವಸೆ ನೀಡಿದರು.

ಕೆಎಸ್‌ಎಂಬಿ ವತಿಯಿಂದಲೇ ರೇಷ್ಮೆ ಖರೀದಿಸುವಂತೆ ವಾರಣಾಸಿಯ ನೇಕಾರರಿಗೆ ಸಚಿವ ಡಾ.ನಾರಾಯಣಗೌಡ ಅವರು ಮನವಿ ಮಾಡಿದರು.

Key words: Visit -Benares silk –saree- weavers-Minister –Karnataka- Silk Purchase – appeal – Narayana Gowda