ಮೈಸೂರಲ್ಲಿ ಸರಕಾರಿ ಭೂಮಿ ರಕ್ಷಣೆಗೆ ಡಿಸಿ ರೋಹಿಣಿ ಸಿಂಧೂರಿ ‘ಭೂ ಚಕ್ರ’ : ಭೂಗಳ್ಳರಲ್ಲಿ ನಡುಕ.

ಮೈಸೂರು,ಜೂನ್,1,2021 : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ತಹಶಿಲ್ದಾರ್, ಉಪವಿಭಾಗಾಧಿಕಾರಿಗಳಿಗೆ ಗೆ ಪತ್ರ ಬರೆದು ಅಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮುಂದು.jk
ಮೈಸೂರಿನ ಆರ್ ಟಿ ಐ ಕಾರ್ಯಕರ್ತ ಗಂಗರಾಜು ದೂರಿನ ಮೇರೆಗೆ ಕ್ರಮಕ್ಕೆ ಮುಂದಾಗಿರುವ ಡಿಸಿ. ಪ್ರಭಾವಿ ರಾಜಕಾರಣಿಗಳ ಭೂ ಅಕ್ರಮ ಬಯಲಿಗೆಳೆಯಲು ಜಿಲ್ಲಾಧಿಕಾರಿ ತಯಾರಿ.
ಮೈಸೂರು ಆರ್ ಟಿ ನಗರ ಭೂ ಅಕ್ರಮದ ದಾಖಲೆ ಪರಿಶೀಲನೆಗೆ ಮುಂದಾಗಿರುವ ಜಿಲ್ಲಾಧಿಕಾರಿ. ಕಡತ ಕಾಲ್ ಮಾಡುತ್ತಿದ್ದಂತೆ ಮೂಡಾ ಅಧಿಕಾರಿಗಳಲ್ಲಿ ಶುರುವಾಗಿದೆ ನಡುಕ.
ಕೇರಗಳ್ಳಿ ಸರ್ವೇ ನಂ. 115ರಲ್ಲಿ 4 ಎಕರೆ ಜಾಗ ವಿವಾದ. ಒಟ್ಟು ಆಕಾರ್ ಬಂದ್ ಇರೋದು 129.22 ಎಕರೆ. ಆದರೆ ಆರ್.ಟಿ.ಸಿ.ಗಳ ಪ್ರಕಾರ 191 ಎಕರೆ ಜಾಗ. 61.18 ಎಕರೆಯಷ್ಟು ಜಾಗಕ್ಕೆ ಹೆಚ್ಚುವರಿಯಾಗಿ ಖಾತೆ ಮಾಡಿಕೊಟ್ಟಿರುವ ಆರೋಪ ಅಧಿಕಾರಿಗಳ ವಿರುದ್ಧ ಕೇಳಿ ಬಂದಿದೆ. ಹೆಚ್ಚುವರಿ ಭೂಮಿಗೆ ಬೇನಾಮಿಗಳಿಗೆ ಪರಿಹಾರ.
ಮುಡಾಕ್ಕೆ 4 ಎಕರೆ ಮಾರಿ ಪರಿಹಾರ ಪಡೆದುಕೊಂಡಿರುವ ಗಂಡ. ಈಗ ಅದೇ ಜಾಗದ ದುರಸ್ತಿಗಾಗಿ ಅರ್ಜಿ ಸಲ್ಲಿಸಿರುವ ಹೆಂಡತಿ. ಆರ್ ಟಿ ಐ ಕಾರ್ಯಕರ್ತ ಗಂಗರಾಜು ಎಂಬುವರಿಂದ ಡಿಸಿಗೆ ದೂರು.

ಲಿಂಗಾಂಬುದಿ ಪಾಳ್ಯ ಸರ್ವೆ ನಂ 65, 66,68 124 ಭೂ ಅಕ್ರಮಕ್ಕೂ ಮರು ಜೀವ. ಗ್ರೀನ್ ಬೆಲ್ಟ್ ಭೂಮಿಯನ್ನೇ ಅನ್ಯಕ್ರಾಂತ ಮಾಡಲು ಮೂಡಾ ಅಧಿಕಾರಿಗಳು ವರದಿ ನೀಡಿರುವ ಆರೋಪ. ಕೆರೆ ಪಕ್ಕದ ಬಫರ್ ಜೋನ್ ಲ್ಯಾಂಡ್ ಗೆ ಅಲಿನೇಷನ್ ಮಾಡಿರುವ ಆರೋಪ.Mysuru DC instructs officials concerned to focus more on patients with comorbidities
ಯಡಹಳ್ಳಿ ಸರ್ವೆ ನಂ 69 ರಲ್ಲಿ ಸರ್ಕಾರಿ ಭೂ ಕಬಳಿಸಿ ಲೇಔಟ್ ನಿರ್ಮಿಸಿದ ಆರೋಪ. ಜತೆಗೆ ದಟ್ಟಗಳ್ಳಿ ಸರ್ವೇ ನಂ. 123ರಲ್ಲಿ 5.02 ಎಕರೆ ಭೂಮಿ ಕಬಳಿಕೆ ಬಗೆಗೂ ಅನುಮಾನ ವ್ಯಕ್ತ. ಆ ಮೂಲಕ ಸುಳ್ಳು ದಾಖಲೆ ಸೃಷ್ಟಿಸಿ ಮೂಡಾ ಆಸ್ತಿಗೆ ಕನ್ನ ಹಾಕಿರುವ ಭೂಗಳ್ಳರು. ಸೂಕ್ತ ತನಿಖೆಗೆ ದೂರುದಾರ ಗಂಗರಾಜ್ ಆಗ್ರಹ.

key words: DC -Rohini Sindhuri -government -land -protection – Mysore.