ಅಮೇರಿಕಾದಲ್ಲಿ ರಸ್ತೆ ಅಪಘಾತ: ಬೀದರ್ ಮೂಲದ ತಂದೆ ಮಗು ಸ್ಥಳದಲ್ಲೇ ಸಾವು..

ಬೆಂಗಳೂರು,ಜೂ,8,2019(www.justkannada.in):   ಅಮೇರಿಕಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ ತಂದೆ ಮತ್ತು ಮಗು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

 ಬೀದರ್ ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಟೆಕ್ಕಿ ಮುಖೇಶ್ ಶಿವಾಜಿವಾರ ದೇಶಮುಖ(27) ಮತ್ತು 2 ವರ್ಷದ ಮಗು ದಿವಿಜಾ ಮೃತಪಟ್ಟವರು. ಪತ್ನಿ ಮೋನಿಕಾ ದೇಶಮುಖಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಗುವಿನ ಹುಟ್ಟುಹಬ್ಬ ಆಚರಿಸಲು ಮುಖೇಶ್ ಪತ್ನಿ ಮೋನಿಕಾ ದೇಶಮುಖ ಮತ್ತು ಮಗುವಿನೊಂದಿಗೆ  ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರು ಟ್ಯಾಂಕರ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ, ಪರಿಣಾಮ ತಂದೆ-ಮಗು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Key words: Road accident in America. Father and Daughter died on the spot.

#Roadaccident #America #Father  #Daughter #died