Monday, September 21, 2026

BDA Apartments

protect farmers BDA JK_Adv BDA Adv
Home Front Page ಸಮಸ್ಯೆ ಇಟ್ಟುಕೊಂಡು ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ: ರೈತರು, ಜನರ ರಕ್ಷಣೆಗೆ ಬದ್ಧ-ಸಿಎಂ ಡಿ ಕೆ...

ಸಮಸ್ಯೆ ಇಟ್ಟುಕೊಂಡು ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ: ರೈತರು, ಜನರ ರಕ್ಷಣೆಗೆ ಬದ್ಧ-ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು, ಸೆಪ್ಟಂಬರ್‌,21,2026 (www.justkannada.in): ರಾಜ್ಯದ ರೈತರು, ಜನರ ರಕ್ಷಣೆ ನನಗೆ ಮುಖ್ಯ. ಅದಕ್ಕೆ ಬದ್ಧನಾಗಿದ್ದೇನೆ. ದೊರೆತಿರುವ ಈ ಅವಕಾಶವನ್ನು ಬಳಸಿಕೊಂಡು ಎಲ್ಲರನ್ನೂ ರಕ್ಷಣೆ ಮಾಡಬೇಕು. ಸಮಸ್ಯೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ’ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.

ಸೋಮವಾರದಿಂದ ಆರಂಭಗೊಂಡಿರುವ 3 ದಿನಗಳ ವಿಶೇಷ ಅಧಿವೇಶನದ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಇದು ಮುಂದುವರಿದ ಅಧಿವೇಶನವೋ, ವಿಶೇಷ ಅಧಿವೇಶನವೋ ಸ್ಪಷ್ಟನೆ ನೀಡಿ ಎಂದು ಪಟ್ಟುಹಿಡಿದರು.

ಈ ಸಂದರ್ಭದಲ್ಲಿ ಮಾತನಾಡಿದ  ಸಿಎಂ ಡಿಕೆ ಶಿವಕುಮಾರ್‌,  ಈ ಹಿಂದಿನ ಸರ್ಕಾರಗಳಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅವರು ತಮಗೆ ತಿಳಿದಂತೆ ಕೆಲಸ ಮಾಡಿರಬಹುದು. ಕೆಲವನ್ನು ವಜಾ ಮಾಡಿರಬಹುದು. ಈಗ ನಾವೆಲ್ಲ ರಾಜಕಾರಣವನ್ನು ಬದಿಗಿಟ್ಟು ರಾಜ್ಯದ ಹಿತಕಾಪಾಡುವ ಕೆಲಸ ಮಾಡಬೇಕಿದೆ. ಹೀಗಾಗಿ ನಿಮ್ಮಿಂದ ಅಮೂಲ್ಯ ಸಲಹೆಗಳನ್ನು ಸ್ವೀಕಾರ ಮಾಡುವ ಉದ್ದೇಶದಿಂದ ಈ ವಿಶೇಷ ಅಧಿವೇಶನ ಕರೆದಿದ್ದೇವೆ’ ಎಂದು ಹೇಳಿದರು.

ಸಮಯ, ತಿಳುವಳಿಕೆ ಒಂದೇ ಸಲ ಸಿಗುವುದಿಲ್ಲ

‘ಸಮಯ ಹಾಗೂ ತಿಳುವಳಿಕೆ ಎರಡೂ ಒಂದೇ ಬಾರಿಗೆ ಸಿಗುವುದು ಅಪರೂಪ. ಸಿಕ್ಕಿದವರು ನಿಜಕ್ಕೂ ಭಾಗ್ಯವಂತರು. ಏಕೆಂದರೆ, ಸಮಯ ಇದ್ದಾಗ ತಿಳುವಳಿಕೆ ಇರುವುದಿಲ್ಲ. ಕಳೆದ ಅಧಿವೇಶನದಲ್ಲಿ 10 ದಿನ ಸಮಯ ಇತ್ತು. ವಿರೋಧ ಪಕ್ಷಗಳು ಅದನ್ನು ಸರಿಯಾಗಿ ಬಳಸಿಕೊಳ್ಳದೆ ವ್ಯರ್ಥ ಮಾಡಿದವು. ಇಂದು ಕಸ್ತೂರಿ ರಂಗನ್ ವರದಿ ಪರಿಣಾಮ ಹಾಗೂ ನಾಡಿನ ರೈತರ, ಬರದ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಲು 3 ದಿನಗಳ ಅಧಿವೇಶನವನ್ನು ಕರೆದಿದ್ದೇವೆ’ ಎಂದು ವಿವರಿಸಿದರು.protect farmers dks dks 8

‘ನಾವು ನಿಂತಿರುವ ಈ ಭೂಮಿ ನಾವೆಲ್ಲಾ ನಮ್ಮದೇ ಅಂದುಕೊಂಡಿದ್ದೇವೆ. ನಾವು ಸತ್ತಾಗ ಈ ಭೂಮಿಗೇ ಸೇರುತ್ತೇವೆ. ಸುಡುವಾಗ ಭೂಮಿಯ ಸೌದೆಯಿಂದಲೇ ಸುಟ್ಟು ಅದನ್ನೂ ಭೂಮಿಗೇ ಬಿಡುತ್ತಾರೆ. ಹಾಗಾಗಿ ಈ ಭೂಮಿಯನ್ನು ಬಿಟ್ಟುಕೊಡುವ ಮಾತೇ ಇಲ್ಲ’ ಎಂದರು.

ಜನರು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದೇನೆ

‘ಕಸ್ತೂರಿ ರಂಗನ್ ವರದಿ ವಿಚಾರವಾಗಿ ನಮ್ಮ ರೈತರ ಬದುಕಿನ ಹಕ್ಕು, ಜನರ ಆಕ್ರೋಶ ಸ್ವಾಭಿಮಾನ ಅರಿತಿದ್ದೇನೆ. ಅವರ ಜೊತೆ ಮುಕ್ತವಾಗಿ ಚರ್ಚೆ ನಡೆಸಿದ್ದೇನೆ. ಎಲ್ಲಾ ಸಂಸತ್ ಸದಸ್ಯರು, ಶಾಸಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ರೈತ ಪ್ರತಿನಿಧಿಗಳೊಂದಿಗೂ ಈ ವಿಚಾರವಾಗಿ ಮಾತನಾಡಿದ್ದೇನೆ. ಸಾವಿರಾರು ಜನ ಅರ್ಜಿಗಳನ್ನೂ ಕೊಟ್ಟಿದ್ದಾರೆ’ ಎಂದು ಹೇಳಿದರು.

‘ಕಸ್ತೂರಿ ರಂಗನ್ ವರದಿಯೇ ಈಗ ಸಮಸ್ಯೆಯಾಗಿರುವಾಗ ಇದರ ಪರಿಹಾರಕ್ಕೆ ಅನೇಕ ಸಲಹೆಗಳು ಬಂದಿವೆ. ಎಲ್ಲವನ್ನೂ ಗಮನಿಸಿ, ಚರ್ಚಿಸಿ ಏನಾದರು ಮಾಡಿ ಪಶ್ಚಿಮಘಟ್ಟದ ಬಡವರಿಗೆ, ರೈತರಿಗೆ, ಒಟ್ಟಾರೆ ಇಡೀ ಕರ್ನಾಟದ ಜನತೆಗೆ ಪರಿಹಾರ ಕಂಡುಕೊಳ್ಳುವ ಸದುದ್ದೇಶದಿಂದ ಈ ಅಧಿವೇಶನದಲ್ಲಿ ನಾವೆಲ್ಲಾ ಸೇರಿದ್ದೇವೆ’  ಎಂದು ಹೇಳಿದರು.

‘ಕೇಂದ್ರ ಜಾರಿ ಮಾಡಲು ಹೊರಟಿರುವ ಕಸ್ತೂರಿ ರಂಗನ್ ವರದಿ ನಮ್ಮ 10 ರಾಜ್ಯದ ಜಿಲ್ಲೆ ಜನರ ಬದುಕಿಗೆ ಮಾರಕವಾಗಿದೆ.  ರೈತರಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಪಶ್ಚಿಮಘಟ್ಟದಲ್ಲಿ ಸುಮಾರು 6ಕ್ಕೂ ಹೆಚ್ಚು ನದಿಗಳು ಹುಟ್ಟಿಹರಿಯುತ್ತಿವೆ. ಅವೈಜ್ಞಾನಿಕ ಕ್ರಮಗಳು ಜನರ ಮುಂದೆ ಬಂದಿರುವುದರಿಂದ ಎಲ್ಲರಿಗೂ ಬದುಕಿನ ಬಗ್ಗೆ ಆತಂಕ ಉಂಟಾಗಿದೆ’ ಎಂದು ಹೇಳಿದರು.

ಕಸ್ತೂರಿ ರಂಗನ್ ವರದಿಯ ಉಲ್ಲೇಖದಂತೆ, ರಾಜ್ಯದ ಪಶ್ಚಿಮಘಟ್ಟದ 19,252 ಚ.ಕಿಮೀ ಸೂಕ್ಷ್ಮಪ್ರದೇಶವಾಗಿದೆ. 961ಕಿ.ಮೀ ಹೆಚ್ಚವರಿಯಾಗಿ ಸೇರ್ಪಡೆಗೊಳಿಸಲಾಗಿದೆ. 3,138 ಎಕರೆ ಖಾಸಗಿ ರೈತರು ಜಮೀನು ಸೇರಿದೆ. ಬೇರೆ ಬೇರೆ ರಾಜ್ಯಗಳು ಮುಖ್ಯವಾಗಿ ಕೇರಳದವರು ಈ ವಿಚಾರವಾಗಿ ತಮ್ಮದೇ ಆದ ಲೆಕ್ಕಾಚಾರ ಮಾಡಿದ್ದಾರೆ’ ಎಂದರು.

ಸಲಹೆಗಳ ಮಹಾಪೂರ ಬಂದಿವೆ

ನಾನು ಪಶ್ಚಿಘಟ್ಟದ ಪ್ರದೇಶಗಳಲ್ಲಿ ವಾಸಿಸುವ ಜನರನ್ನು, ರೈತರನ್ನು, ಜನ ಪ್ರತಿನಿಧಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಹಲವರು ಹಲವು ರೀತಿ ಸಲಹೆಗಳನ್ನು ನೀಡಿದ್ದಾರೆ. ರೈತರು ವರದಿಯನ್ನೇ ತಿರಸ್ಕಾರ ಮಾಡಿ, ಅಧ್ಯಯನಕ್ಕೆ ಸಮಿತಿ ರಚಿಸಿ. ಕೇರಳ ಮಾದರಿ ಅನುಸರಿಸಿ, ಪರಿಸರ ಸೂಕ್ಷ್ಮವಲಯ ಎನ್ನುವುದನ್ನೇ ತೆಗೆದುಹಾಕಿ’ ಎಂದು ಹೇಳಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ ಅವರು ತಾಂತ್ರಿಕ ಸಮಿತಿಯನ್ನು ರಚಿಸಿ ಎಂದರೆ,  ಶಾಸಕ ಆರಗ ಜ್ಞಾನೇಂದ್ರ ಅವರು ಒಕ್ಕೂಟ ವ್ಯವಸ್ಥೆಯಲ್ಲಿ ಅರಣ್ಯಗಳ ಕುರಿತ ಕಾಯ್ದೆಗಳು ಕೇಂದ್ರದ ಸುಪರ್ದಿಯಲ್ಲಿವೆ. ಅವುಗಳನ್ನು ರಾಜ್ಯದ ವ್ಯಾಪ್ತಿಗೆ  ಬಿಟ್ಟುಕೊಡುವಂತೆ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದ್ದಾರೆ’ ಎಂದರು.

ಎಷ್ಟೋ ಜನರು ಬಫರ್ ಜೋನ್ ಅನ್ನು ಕಾಡಿಗೆ ಸೀಮಿತ ಮಾಡಿ, ನಮ್ಮ ಜಮೀನಿಗೆ ಗಡಿ ಏಕೆ ನಿಗದಿ ಮಾಡುತ್ತೀರಿ. ಹಾಗಂತ ನಾವು ಪರಿಸರ ವಿರೋಧಿಗಳಲ್ಲ. ನಮ್ಮ ಆಸ್ತಿ, ನಮ್ಮ ಬದುಕಿಗೆ ತೊಂದರೆ ಕೊಡಬೇಡಿ’ ಎಂಬ ಜನರ ಬೇಡಿಕೆಗಳನ್ನು ಸದನದ ಮುಂದೆ ವಿವರಿಸಿದರು.people dks-session dks session

2021ರಲ್ಲಿ ಆರಂಭವಾಗಿರುವ ಗಡಿಗುರುತಿಸುವ ಸಂಜೀವ್ ಕುಮಾರ್ ವರದಿ ಇನ್ನು ನನ್ನ ಕೈ ಸೇರಿಲ್ಲ.  ಬಗರ್ ಹುಕಂ ಸಂಬಂಧಿಸಿದಂತೆ ಫಾರಮ್ ನಂಬರ್ 50, 51, 94ಸಿ ಕೆಲಸಗಳು ಆಗುತ್ತಿಲ್ಲ. ಶಾಸಕರು ಬಗರ್ ಹುಕುಂ ಸಮಿತಿಯ ಸಭೆಯನ್ನು ನಿಯಮಿತವಾಗಿ ಕರೆಯುತ್ತಿಲ್ಲ. ಅರ್ಜಿಗಳು ವಿಲೇವಾರಿ ಮಾಡುತ್ತಿಲ್ಲ. ಇದರಿಂದ ಅಕ್ರಮ-ಸಕ್ರಮಕ್ಕೂ ತೊಂದರೆ ಆಗುತ್ತಿದೆ’ ಎಂದರು.

ಇದರ ಜೊತೆಗೆ ಸರ್ವ ಪಕ್ಷಗಳ ನಿಯೋಗವನ್ನು ಕರೆದುಕೊಂಡು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ, ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳುವ ಸಲಹೆಯೂ ಬಂದಿದೆ. ಕೆಲವರು ಆರ್ಟಿಕಲ್ 371 ಸೇರಿಸಿ ವಿಶೇಷ ಸ್ಥಾನಮಾನ ನೀಡಿ ಎಂದು ಗಮನ ಸೆಳೆದಿದ್ದಾರೆ‘ ಎಂದು ವಿವರಿಸಿದರು.

ವಿಧಿ ಇಲ್ಲದೇ ಅಧಿವೇಶನ 2 ದಿನ ಮೊಟಕು

ಇದಕ್ಕೂ ಮುನ್ನ ಆರಂಭದಲ್ಲಿ ಮಾತನಾಡಿದ ಸಿಎಂ ಡಿ ಕೆ ಶಿವಕುಮಾರ್ ಅವರು, “ನಾವು ಉತ್ತಮ ಚಿಂತನೆಯನ್ನು ಇಟ್ಟುಕೊಂಡು ಮುಂಗಾರು ಅಧಿವೇಶನವನ್ನು ಕರೆದಿದ್ದೆವು. ವಿರೋಧ ಪಕ್ಷಗಳು ಬಾಯಿ ಬಿಡಲು ಅವಕಾಶ ನೀಡಲಿಲ್ಲ. ಬರದ ಬಗ್ಗೆ ಚರ್ಚೆ ಮಾಡಬೇಕು ಎಂದು ವಿರೋಧ ಪಕ್ಷಗಳೇ ನಿಲುವಳಿ ಸೂಚನೆಯಲ್ಲಿ ಸೂಚಿಸಿದ್ದರು. ಅದನ್ನು ಚರ್ಚೆಗೆ ತೆಗೆದುಕೊಳ್ಳಲು ಅವರು ಅವಕಾಶ ನೀಡಲಿಲ್ಲ. ಸಭಾಧ್ಯಕ್ಷರು ಸುಮಾರು 10 ಬಾರಿ ವಿರೋಧ ಪಕ್ಷದವರನ್ನು ಕರೆಸಿ ಒಪ್ಪಂದಕ್ಕೆ ಬನ್ನಿ ಎಂದು ಮನವಿ ಮಾಡಿದಿರಿ. ಅವರು ಒಪ್ಪಂದಕ್ಕೆ ಮುಂದಾಗಲಿಲ್ಲ. ವಿಧಿ ಇಲ್ಲದೇ ನಾನು ಅಧಿವೇಶನವನ್ನು 2 ದಿನಗಳ ಕಾಲ ಮೊಟಕುಗೊಳಿಸಬೇಕಾಯಿತು. ನಂತರ ನಾನು ಮಂತ್ರಿಗಳು, ಶಾಸಕರ ಸಭೆ ನಡೆಸಿ ಚರ್ಚೆ ಮಾಡಿದೆ” ಎಂದರು.

ಜನರ ಭಾವನೆ, ಬದುಕು ತಿಳಿಯಲು ಅನೇಕ ಭಾಗಗಳಿಗೆ ಭೇಟಿ ನೀಡಿದ್ದೇನೆ. ಈ ಮಧ್ಯೆ ರಸ್ತೂರಿ ರಂಗನ್ ವರದಿ ವಿಚಾರವಾಗಿ ಕೇಂದ್ರ ಸರ್ಕಾರದ ಸೂಚನೆ ಬಂದಿದ್ದು, ಸೆ.27ರ ಒಳಗಾಗಿ ನಮ್ಮ ತೀರ್ಮಾನವನ್ನು ಕೇಂದ್ರಕ್ಕೆ ಕಳುಹಿಸಬೇಕಾಗಿದೆ. ಹೀಗಾಗಿ ರಾಜ್ಯದ ಹಿತ ಕಾಪಾಡಬೇಕು ಎಂಬ ಆಶಯದಿಂದ ಈ ವಿಶೇಷ ಅಧಿವೇಶನ ಕರೆಯುವ ತೀರ್ಮಾನ ಮಾಡಲಾಗಿದೆ. ನಾನು ಬೇಕಿದ್ದರೆ ಈ ಹಿಂದೆ ನಮ್ಮ ಸರ್ಕಾರ ಕೈಗೊಂಡಿದ್ದ ತೀರ್ಮಾನವನ್ನೇ ಮತ್ತೆ ಕಳುಹಿಸಬಹುದಾಗಿತ್ತು. ಆದರೆ, ಇದು ನನ್ನ ವೈಯಕ್ತಿಕ ತೀರ್ಮಾನ ಆಗಬಾರದು, ಸಂಕಷ್ಟಕ್ಕೆ ಸಿಲುಕಿರುವ ರೈತರು, ಜನಸಾಮಾನ್ಯರು, ಆ ಭಾಗದ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲು ಬರ, ರೈತರ ಸಮಸ್ಯೆ ಹಾಗೂ ಕಸ್ತೂರಿ ರಂಗನ್ ಅವರ ವರದಿ ವಿಚಾರವನ್ನು ಚರ್ಚೆ ಮಾಡಲು ಈ ವಿಶೇಷ ಅಧಿವೇಶನ ಕರೆಯಲಾಗಿದೆ” ಎಂದು ವಿವರಿಸಿದರು.

ನಾನು ಸುಮ್ಮನೆ ಇಲ್ಲಿಗೆ ಬಂದು ಕೂತಿಲ್ಲ

ಈ ವಿಶೇಷ ಅಧಿವೇಶನ ನಡೆಸಲು ವಿರೋಧ ಪಕ್ಷಗಳು ಮನವಿ ಮಾಡಿಲ್ಲ, ನಮ್ಮ ಮೇಲೆ ನಂಬಿಕೆ ಇಟ್ಟು ಅಧಿಕಾರಕ್ಕೆ ತಂದಿರುವ ರಾಜ್ಯದ ಜನರ ಭಾವನೆ ಅರಿಯಲು ಅಧಿವೇಶನ ಕರೆಯಲಾಗಿದೆ. ಅವರು ವಿರೋಧ ಪಕ್ಷದವರು ನಿಲುವಳಿ ಸೂಚನೆ ನೀಡಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ನಾನು ಸುಮ್ಮನೆ ಇಲ್ಲಿಗೆ ಬಂದು ಕೂತಿಲ್ಲ. ರಾಜ್ಯದ ನಾಲ್ಕು ವಲಯಗಳಿಗೆ ಹೋಗಿ ಅಲ್ಲಿ ಸಭೆಗಳನ್ನುಮಾಡಿದ್ದು, ಅಲ್ಲಿಗೆ ಖುದ್ದಾಗಿ ಹೋಗಿ ಪರಿಸ್ಥಿತಿ ಅವಲೋಕಿಸಿದ್ದೇನೆ. ನಮ್ಮ ಸರ್ಕಾರ ಜನರಿಗೆ ಯಾವ ರೀತಿ ಸಹಾಯ ಮಾಡಬೇಕು ಎಂದು ಅನೇಕ ತೀರ್ಮಾನ ಮಾಡಲಾಗಿದೆ” ಎಂದರು.

“ಕಲಬುರ್ಗಿ, ಬೆಳಗಾವಿ, ಚಿತ್ರದುರ್ಗಗಳಲ್ಲಿ ಎಲ್ಲಾ ಶಾಸಕರನ್ನು ಕರೆಸಿ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈಗಾಗಲೇ 102 ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು, ಇನ್ನು ನೂರು ತಾಲ್ಲೂಕುಗಳನ್ನು ಘೋಷಣೆ ಮಾಡಲು ಪ್ರಕ್ರಿಯೆ ನಡೆಯುತ್ತಿದೆ. ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂಗಾರು ಅಧಿವೇಶನದಲ್ಲಿ ಈ ವಿಚಾರವಾಗಿ ಚರ್ಚೆ ಮಾಡಲು ಯಾವುದೇ ಶಾಸಕರಿಗೆ ಅವಕಾಶ ಸಿಗಲಿಲ್ಲ. ಇದಕ್ಕೆ ವಿರೋಧ ಪಕ್ಷಗಳೇ ಕಾರಣ. ಅದು ಅವರ ರಾಜಕೀಯ ಬದ್ಧತೆ, ಅದರ ಬಗ್ಗೆ ನಾನು ಈಗ ಚರ್ಚೆ ಮಾಡುವುದಿಲ್ಲ” ಎಂದು ಹೇಳಿದರು.

“ಮಂತ್ರಿಯೊಬ್ಬರ ರಾಜಿನಾಮೆಗೆ ಅವರು ಆಗ್ರಹಿಸಿದರು. ಯಾವ ಕಾರಣಕ್ಕೆ ರಾಜಿನಾಮೆ ಕೇಳುತ್ತಿದ್ದೀರಿ ಎಂದು ನಾವು ಕೇಳಿದರೂ ಅವರು ನಮಗೆ ವಿವರಣೆ ನೀಡಲಿಲ್ಲ. ಇದೇ ಸದನದಲ್ಲಿ ಅದರ ಬಗ್ಗೆ ಚರ್ಚೆ ಮಾಡಬಹುದಾಗಿತ್ತು. ಆದರೆ ನಮಗೆ ಮಾತನಾಡಲು ಅವರು ಅವಕಾಶ ನೀಡಲಿಲ್ಲ. ನಂತರ ನಾವು ನಿರಪರಾಧಿಯಿಂದ ರಾಜಿನಾಮೆಯನ್ನು ಪಡೆದೆವು. ಇಷ್ಟೇಲ್ಲಾ ಆದ ಬಳಿಕವೂ ಅವರು ಪಾದಯಾತ್ರೆ ಮಾಡಿದರು. ಅವರ ರಾಜಕೀಯ ಅವರು ಮಾಡಲಿ, ನಾನು ಪ್ರಶ್ನೆ ಮಾಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾದಯಾತ್ರೆ, ಹೋರಾಟ ಅವರ ಹಕ್ಕು, ಅವರು ಅದನ್ನು ಎಷ್ಟಾದರೂ ಮಾಡಿಕೊಳ್ಳಲಿ” ಎಂದು ತಿಳಿಸಿದರು.

“ನಮ್ಮ ಸರ್ಕಾರಕ್ಕೆ ಸಂವಿಧಾನದಿಂದ ಬಂದಿರುವ ಈ ಹಕ್ಕನ್ನು ನಾವು ಬಳಸಿಕೊಳ್ಳುತ್ತೇವೆ. ಕಸ್ತೂರಿ ರಂಗನ್ ವರದಿಯಿಂದ ತೊಂದರೆ ಅನುಭವಿಸುತ್ತಿರುವ ಪ್ರತಿಯೊಬ್ಬ ರೈತನ ನೋವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅಲ್ಲಿನ ಜನ, ಶಾಸಕರು, ಸಂಸತ್ ಸದಸ್ಯರು ಎಲ್ಲರೂ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ಈ ವರದಿಯನ್ನು ತಿರಸ್ಕಾರ ಮಾಡಿ ಎಂದು ತೀರ್ಮಾನಿಸಿ ಕಳುಹಿಸಿದ್ದರೂ ಕೇಂದ್ರ ಸರ್ಕಾರ ಮತ್ತೆ ಅಧಿಸೂಚನೆ ಪ್ರಕಟಿಸಿದೆ. ಇದರ ಬಗ್ಗೆ ನಾವು ಏನು ಮಾಡಬೇಕು ಎಂದು ವಿರೋಧ ಪಕ್ಷದವರೇ ನಮಗೆ ಸಲಹೆ ನೀಡಲಿ. ನಾವು ಅವರಿಗೆ ಕೊಟ್ಟಿರುವ ಈ ಅವಕಾಶಕ್ಕೆ ವಿರೋಧ ಪಕ್ಷದವರು ನಮಗೆ ಅಭಿನಂದನೆ ಸಲ್ಲಿಸಬೇಕು” ಎಂದು ಕುಟುಕಿದರು.

“ವಿರೋಧ ಪಕ್ಷದ ಶಾಸಕರು ಸೇರಿದಂತೆ ಎಲ್ಲಾ ಪಕ್ಷದ ಶಾಸಕರು, ಸಂಸದರು ಇದ್ದರು. ಈ ವಿಚಾರದಲ್ಲಿ ಅಧಿಕಾರಿಗಳಿಗಿಂತ ಹೆಚ್ಚಾಗಿ ರೈತರು ಈ ವರದಿ ಬಗ್ಗೆ ಹೆಚ್ಚು ಅಧ್ಯಯನ ಮಾಡಿದ್ದಾರೆ. ಅವರ ಅಭಿಪ್ರಾಯ ಕೇಳಿ ನಾವಿಲ್ಲಿಗೆ ಬಂದಿದ್ದೇವೆ. ಹೀಗಾಗಿ ಇಲ್ಲಿ ನಿಲುವಳಿ ಸೂಚನೆ ಅಗತ್ಯವಿಲ್ಲ. ಸರ್ಕಾರವೇ ಈ ವಿಚಾರದಲ್ಲಿ ವಿರೋಧ ಪಕ್ಷಗಳ ಅಭಿಪ್ರಾಯ ಪಡೆಯಲು ಈ ಅಧಿವೇಶನ ಕರೆದಿದೆ. ಇಂದು 24 ತಾಸು ಬೇಕಾದರೂ ಈ ವಿಚಾರದ ಬಗ್ಗೆ ಚರ್ಚೆ ಮಾಡಿ. ಈ ವಿಚಾರದ ಚರ್ಚೆ ಮಾಡಬೇಕು ಎಂಬುದು ಈ ಸರ್ಕಾರದ ಬಯಕೆ, ಚಿಂತನೆಯಾಗಿದೆ. ಇದು ಕೇವಲ ನಮ್ಮ ಸರ್ಕಾರ ಮಾತ್ರವಲ್ಲ. ವಿರೋಧ ಪಕ್ಷಗಳನ್ನು ಒಳಗೊಂಡ ಸರ್ಕಾರ. ಎಲ್ಲರಿಗೂ ಅವಕಾಶ ಸಿಗಲಿ ಎಂದು ಈ ತೀರ್ಮಾನಕ್ಕೆ ಬರಲಾಗಿದೆ. ವಿರೋಧ ಪಕ್ಷಗಳು ಯಾವ ರೀತಿ ಬೇಕಾದರೂ ತಮ್ಮ ವಿಚಾರ ಮಂಡಿಸಲಿ, ನಮ್ಮ ಯಾವುದೇ ಅಭ್ಯಂತರವಿಲ್ಲ” ಎಂದು ಸ್ಪಷ್ಟಪಡಿಸಿದರು.

ನಂತರ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡಿಲ್ಲ ಎಂದು ವಿರೋಧ ಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು ವಾಗ್ವಾದಕ್ಕೆ ಇಳಿದರು. ಅವರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, “ಅಶೋಕ್ ಅವರು ಸಂವಿಧಾನಿಕ ಹುದ್ದೆಯಲ್ಲಿದ್ದಾರೆ. ಇದು ಸಾರ್ವಜನಿಕವಾಗಿ ಮಹತ್ವವಾದ ವಿಚಾರ. ಇದು ಜನರ ವಿಚಾರ. ನನಗೆ ಸಿಕ್ಕಿರುವ ಅವಕಾಶದಲ್ಲಿ ಒಂದು ಕಚೇರಿಯಲ್ಲಿ ತೀರ್ಮಾನ ಮಾಡಬಾರದು ಸಾರ್ವಜನಿಕವಾಗಿ ಚರ್ಚೆಯಾಗಬೇಕು ಎಂದು ವಿಶೇಷ ಅಧಿವೇಶನ ಕರೆಯಲು ತೀರ್ಮಾನಿಸಿದ್ದೇನೆ. ಈ ವಿಚಾರಗಳ ಬಗ್ಗೆ ವಿಶೇಷವಾಗಿ ಚರ್ಚೆ ಮಾಡಬೇಕಾಗಿರುವುದರಿಂದ ನಾವು ಇದನ್ನು ವಿಶೇಷ ಅಧಿವೇಶನ ಎಂದು ನಮೂದಿಸಿದಿದ್ದೇವೆ. ಇದರ ಬಗ್ಗೆ ವಿರೋಧ ಪಕ್ಷದ ನಾಯಕರಿಗೆ ಚೆನ್ನಾಗಿ ಗೊತ್ತಿದೆ. ಸರ್ಕಾರ ಅಧಿವೇಶನ ಕರೆದಿರುವುದನ್ನು ಜನ ಮೆಚ್ಚಿಕೊಂಡಿದ್ದಾರೆ ಎಂದು ನಿಮ್ಮಿಂದ ಸಹಿಸಲು ಆಗುತ್ತಿಲ್ಲ. ಹೊರಗಡೆ ನಮ್ಮ ತೀರ್ಮಾನವನ್ನು ನೀವೇ ಅಭಿನಂದಿಸಿದ್ದೀರಿ” ಎಂದು ತಿಳಿಸಿದರು.Session CM D.K. Shivakumar jk02

 

English Summary
Title

D.K. Shivakumar Rejects Kasturirangan Report to Protect Karnataka Farmers

Short Description
Karnataka Chief Minister D.K. Shivakumar launched a crucial state legislature session to protect farmers and residents from the Kasturirangan report's Western Ghats Eco-Sensitive Area (ESA) draft notification. Highlighting the report as unscientific, Shivakumar ordered forest officials to immediately stop issuing eviction notices to traditional cultivators in the Malnad region. The government is also addressing the severe drought crisis with a one-year loan repayment moratorium for local farmers. Following this special session, the CM will lead an all-party delegation to New Delhi before the September 27 deadline to present Karnataka’s official objections, ensuring the safety of livelihoods, land rights, and local communities.
Keywords
protect farmers, people, Session CM D.K. Shivakumar