Monday, September 21, 2026

BDA Apartments

ಕಬಿನಿ ನಾಲೆಗಳಿಗೆ ನೀರು ಹರಿಸುವಂತೆ ರೈತರಿಂದ ಬೃಹತ್ ಪ್ರತಿಭಟನೆ, ಆಕ್ರೋಶ BDA JK...
Home Front Page ಕಬಿನಿ ನಾಲೆಗಳಿಗೆ  ನೀರು ಹರಿಸುವಂತೆ ರೈತರಿಂದ  ಬೃಹತ್ ಪ್ರತಿಭಟನೆ, ಆಕ್ರೋಶ

ಕಬಿನಿ ನಾಲೆಗಳಿಗೆ  ನೀರು ಹರಿಸುವಂತೆ ರೈತರಿಂದ  ಬೃಹತ್ ಪ್ರತಿಭಟನೆ, ಆಕ್ರೋಶ

ಮೈಸೂರು,ಸೆಪ್ಟಂಬರ್‌, 21,2026 (www.justkannada.in): ಕಬಿನಿ  ಜಲಾಶಯದಿಂದ ನಾಲೆಗಳಿಗೆ  ನೀರು ಹರಿಸುವಂತೆ ಆಗ್ರಹಿಸಿ ರೈತರು  ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ  ವ್ಯಕ್ತಪಡಿಸಿದರು.

ಕಬಿನಿ ಅಚ್ಚುಕಟ್ಟು ಭಾಗದ  ರೈತರು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ  ಗನ್ ಹೌಸ್  ಸರ್ಕಲ್ ಬಳಿ ಜಮಾಯಿಸಿ  ಕಾಡ ಕಚೇರಿಗೆ ಮುತ್ತಿಗೆ ಹಾಕಿ ನಾಲೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿದರು.

ಈ ವೇಳೆ ಕುರುಬೂರು ಶಾಂತಕುಮಾರ್ ಮಾತನಾಡಿ,  ಕಬಿನಿ ಜಲಾಶಯ ಎರಡು ತಿಂಗಳ ಹಿಂದೆ  ಭರ್ತಿಯಾಗಿದ್ದರೂ ರೈತರಿಗೆ ಮೋಸ ಮಾಡಿ ರಾಜ್ಯ ಸರ್ಕಾರ ತಮಿಳುನಾಡಿನ ಮುಖ್ಯಮಂತ್ರಿಗಳ ಸ್ನೇಹಕ್ಕಾಗಿ  ನೀರು ಹರಿಸಿದೆ. ಈ ಮೂಲಕ ಕಬಿನಿ ಜಲಾಶಯ ಖಾಲಿ ಮಾಡಿ ಕಾವೇರಿ ಅಚ್ಚು ಕಟ್ಟು ರೈತರನ್ನು ಬಲಿ ಕೊಟ್ಟಿದೆ .      ಈಗ ಮೈಸೂರು ಮಂಡ್ಯ ಚಾಮರಾಜನಗರ ಜಿಲ್ಲೆಗಳನ್ನ ಬರಪೀಡಿತ ಪ್ರದೇಶ ಎಂದೂ ಘೋಷಣೆ ಮಾಡಿ. ರೈತರ ಕಣ್ಣಿಗೆ ಮಣೆರೆಚುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.ಕಬಿನಿ ನಾಲೆಗಳಿಗೆ ನೀರು ಹರಿಸುವಂತೆ ರೈತರಿಂದ ಬೃಹತ್ ಪ್ರತಿಭಟನೆ farmer

ಪ್ರತಿಭಟನೆ ಸ್ಥಳಕ್ಕೆ ಬಂದ ಅಧೀಕ್ಷಕ  ಅಭಿಯಂತರ ರಘು ಮೂರ್ತಿ ಅವರು ಮಾತನಾಡಿ ರೈತರ ಸಮಸ್ಯೆ ಆಲಿಸಿದರು. ಈ ವೇಳೆ ರೈತರು ಅಧಿಕಾರಿಯನ್ನ ತರಾಟೆ ತೆಗೆದುಕೊಂಡರು. ನಂತರ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಮುಖ್ಯ ಇಂಜಿನಿಯರ್ ಗಣೇಶ್ ಅಧಿಕ್ಷಕ ಅಭಿಯಂತರ ರಘುಮೂರ್ತಿ ಹಾಗೂ ಇತರ ಅಧಿಕಾರಿಗಳ ಸಮ್ಮುಖದ ಸಭೆ ನಡೆದು ನಾಲೆಗಳಿಗೆ  ಸೆಪ್ಟಂಬರ್‌ 27ರಿಂದ ಎರಡನೇ ಕಟ್ಟು  ನೀರು ಹರಿಸಲಾಗುವುದು . ಈಗ ಉಳಿಕೆ  ಮಾಡಿದ ನೀರೆನ್ನ ಮೂರನೇ ಕಟ್ಟು ನೀರಿಗೆ ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಚಳುವಳಿಯನ್ನು ಕೈಬಿಡಲಾಯಿತು .ಆಕ್ರೋಶ jk02

ಪ್ರತಿಭಟನೆಯಲ್ಲಿ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ಕೆ.ಜಿ.ಗುರುಸ್ವಾಮಿ, ಕಬಿನಿ  ರೈತ ಹಿತರಕ್ಷಣ ಸಮಿತಿ ಅಧ್ಯಕ್ಷ  ಗೌರಿಶಂಕರ್,  ಸಿದ್ದೇಶ್, , ದೇವನೂರು ವಿಜಯೇಂದ್ರ, ಉಡಿಗಾಲ ರೇವಣ್ಣ ಸೇರಿ ಹಲವರು ಉಪಸ್ಥಿತರಿದ್ದರು.

Key words: protest, farmers, demanding, release, water, Kabini canals.