Saturday, November 7, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಮೈಸೂರಿನಲ್ಲಿ MIT ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜು ಆರಂಭ

ಮೈಸೂರಿನಲ್ಲಿ MIT ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜು ಆರಂಭ

ಮೈಸೂರು,ಸೆಪ್ಟಂಬರ್‌,21,2026 (www.justkannada.in) : ಮಹಾರಾಜ ಎಜುಕೇಶನ್ ಟ್ರಸ್ಟ್‌ (ರಿ) ವತಿಯಿಂದ ಮೈಸೂರಿನಲ್ಲಿ ತನ್ನ 17ನೇ ಶಿಕ್ಷಣ ಸಂಸ್ಥೆಯಾಗಿ MIT ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ ಆರಂಭಿಸಲಾಗಿದೆ.

ಸಂಸ್ಥೆಯಲ್ಲಿ ಬ್ಯಾಚುಲರ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್ (BNYS) ಐದು ವರ್ಷದ ವೃತ್ತಿಪರ ಪದವಿ ಕೋರ್ಸ್‌ ನೀಡಲಾಗುತ್ತಿದ್ದು, ನಾಲ್ಕು ವರ್ಷಗಳ ಶೈಕ್ಷಣಿಕ ಅಧ್ಯಯನದ ಬಳಿಕ ಒಂದು ವರ್ಷದ ಕಡ್ಡಾಯ ಕ್ಲಿನಿಕಲ್ ಇಂಟರ್ನ್‌ಶಿಪ್‌ ಇರಲಿದೆ.

ನ್ಯಾಚುರೋಪತಿ, ಯೋಗ, ಆಧುನಿಕ ವೈದ್ಯಕೀಯ ವಿಜ್ಞಾನ, ಪೌಷ್ಟಿಕಾಂಶ, ಯೋಗ ಚಿಕಿತ್ಸೆ, ಜಲಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಅಕ್ಯುಪಂಕ್ಚರ್, ಅಕ್ಯುಪ್ರೆಶರ್, ಗಿಡಮೂಲಿಕೆ ಆಧಾರಿತ ಚಿಕಿತ್ಸೆ, ಸಮಾಲೋಚನೆ ಹಾಗೂ ಸಂಶೋಧನಾ ವಿಧಾನ ಸೇರಿದಂತೆ ವಿವಿಧ ವಿಷಯಗಳನ್ನು ಪಠ್ಯಕ್ರಮದಲ್ಲಿ ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಕ್ಲಿನಿಕಲ್ ತರಬೇತಿಗೂ ಒತ್ತು ನೀಡಲಾಗುತ್ತದೆ.

10+2/ದ್ವಿತೀಯ ಪಿಯುಸಿ ಶಿಕ್ಷಣದಲ್ಲಿ PCB ವಿಷಯಗಳಲ್ಲಿ ಕನಿಷ್ಠ 45% ಅಂಕ ಪಡೆದಿರುವ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರಾಗಿದ್ದು, NEET ಕಡ್ಡಾಯವಲ್ಲ ಎಂದು ಸಂಸ್ಥೆ ತಿಳಿಸಿದೆ.

BNYS ಪದವೀಧರರಿಗೆ ಕ್ಲಿನಿಕಲ್ ಪ್ರಾಕ್ಟೀಸ್, AYUSH ಆಸ್ಪತ್ರೆಗಳು, ವೆಲ್‌ನೆಸ್ ಕೇಂದ್ರಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಆರೋಗ್ಯ ಮತ್ತು ವೆಲ್‌ನೆಸ್ ಉದ್ಯಮಗಳಲ್ಲಿ ವಿವಿಧ ವೃತ್ತಿ ಅವಕಾಶಗಳಿವೆ.

ಮೈಸೂರಿನ MITM ಕ್ಯಾಂಪಸ್‌ ನಲ್ಲಿ ಸ್ಥಾಪನೆಯಾಗಿರುವ ಸಂಸ್ಥೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 80 ಕಿ.ಮೀ. ವ್ಯಾಪ್ತಿಯ ಪ್ರದೇಶಗಳನ್ನು ಸಂಪರ್ಕಿಸುವ 100ಕ್ಕೂ ಹೆಚ್ಚು ಬಸ್‌ಗಳ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ ಸೌಲಭ್ಯವೂ ಇರಲಿದೆ.MIT College jk02

ವೃತ್ತಿಪರ ಶಿಕ್ಷಣದ ಜೊತೆಗೆ ಸಮಗ್ರ ಆರೋಗ್ಯ ಮತ್ತು ಆರೈಕೆ ಕ್ಷೇತ್ರದಲ್ಲಿ ಹೊಸ ಶೈಕ್ಷಣಿಕ ಅವಕಾಶಗಳನ್ನು ಸೃಷ್ಟಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು MET (ರಿ) ಉಪಾಧ್ಯಕ್ಷ ಡಾ. ಜಿ. ಹೇಮಂತಕುಮಾರ್ ತಿಳಿಸಿದ್ದಾರೆ.

 

English Summary
Title

MIT Naturopathy & Yoga Sciences College Launched in Mysuru | BNYS Admissions

Short Description
Maharaja Institute of Naturopathy and Yogic Sciences (MITCNYS), Mysuru is officially launched for BNYS admissions. Managed by the trusted Maharaja Education Trust (MET) in Karnataka, this premier institution offers a comprehensive Bachelor of Naturopathy and Yogic Sciences degree. The state-of-the-art campus combines natural healing, drugless therapies, and modern scientific medicine with a fully functional on-site hospital for clinical training. Best of all, standard BNYS admission requires no NEET score—just a 10+2 science background. Secure your future in holistic healthcare and integrative medicine at MITCNYS Mysore today!
Keywords
MIT College, Naturopathy, Yoga Sciences, launched, Mysuru