Monday, September 21, 2026

BDA Apartments

Create BDA JK_Adv BDA Adv
Home Front Page ಹಸಿ ಮತ್ತು ಒಣ ಕಸವನ್ನು ‌ಮೂಲದಲ್ಲೇ ಬೇರ್ಪಡಿಸುವ ಬಗ್ಗೆ ಜಾಗೃತಿ ಮೂಡಿಸಿ- ಸಿ. ಶಂಕರ ಅಂಕನಶೆಟ್ಟಿಪುರ

ಹಸಿ ಮತ್ತು ಒಣ ಕಸವನ್ನು ‌ಮೂಲದಲ್ಲೇ ಬೇರ್ಪಡಿಸುವ ಬಗ್ಗೆ ಜಾಗೃತಿ ಮೂಡಿಸಿ- ಸಿ. ಶಂಕರ ಅಂಕನಶೆಟ್ಟಿಪುರ

ಮೈಸೂರು, ಸೆಪ್ಟಂಬರ್‌, 21,2026 (www.justkannada.in): ಸಾರ್ವಜನಿಕರು ಕಸವನ್ನು ಪೌರಕಾರ್ಮಿಕರಿಗೆ ನೀಡುವ ಮೊದಲೇ ಹಸಿ ಮತ್ತು ಒಣ ಕಸವನ್ನು  ಬೇರ್ಪಡಿಸುವ ನೀಡುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ ಶಂಕರ ಅಂಕನಶೆಟ್ಟಿಪುರ ಅವರು ತಿಳಿಸಿದರು.

ಇಂದು ಮೈಸೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪ್ರಗತಿ‌ ಪರಿಶೀಲನಾ ಸಭೆ ನಡೆಸಿದರು. ಮೊದಲಿಗೆ ಪೌರಕಾರ್ಮಿಕ ರೊಂದಿಗೆ ಸಂವಾದ ನಡೆಸಿ ಅವರಿಗೆ ಇರುವ ತೊಂದರೆಗಳ ಬಗ್ಗೆ ಸಿ ಶಂಕರ ಅಂಕನಶೆಟ್ಟಿಪುರ  ಮಾಹಿತಿ ಪಡೆದುಕೊಂಡರು.

ಕಸ ಸಂಗ್ರಹಿಸುವ ವಾಹನ ವಿಭಾಗದ ವಾಹನ ಚಾಲಕರು, ಸಹಾಯಕರು ಸಹ ಸ್ವಚ್ಚತಾ ಕೆಲಸ ನಿರ್ವಹಿಸುವ ಭಾಗವಾಗಿದ್ದು,  ಇವರಿಗೆ ದೊರಕುತ್ತಿರುವ ಸಂಬಳ‌ ಕಡಿಮೆಯಿರುತ್ತದೆ, ಸಂಬಳ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಶೀಘ್ರದಲ್ಲೇ ತೊಂದರೆಗಳನ್ನು‌ ಸರಿಪಡಿಸಲಾಗುವುದು ಎಂದರು.

ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಬೇಕು ಎಂಬ ಧೋರಣೆ ಯನ್ನು ತೊರೆಯಬೇಕು‌. ಪೌರಕಾರ್ಮಿಕರು, ಒಳಚರಂಡಿ, ವಾಹನ ಚಾಲಕರು ಹಾಗೂ ಸಹಾಯಕರು ಇವರ ಮಕ್ಕಳು ವಿದ್ಯಾಭ್ಯಾಸದ ಮಾಹಿತಿಯನ್ನು ಪರಿಸರ ಅಭಿಯಂತರರಿಂದ ಸಂಗ್ರಹಿಸಿ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡುವಂತೆ ಪ್ರೇರೇಪಿಸಿ. ಅವರಿಗೆ ಮಹಾನಗರ ಪಾಲಿಕೆಯ ಶೇ 24.10, ಸಮಾಜ ಕಲ್ಯಾಣ ಸೇರಿದಂತೆ ಇನ್ನಿತರೆ ಇಲಾಖೆಯಿಂದ ದೊರಕುವ ಸೌಲಭ್ಯವನ್ನು ಒದಗಿಸಿ ಪೌರಕಾರ್ಮಿಕರ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದರು.

ಖಾಯಂ ಪೌರಕಾರ್ಮಿಕರಿಗೆ ಈಗಾಗಲೇ ಗೃಹ ಭಾಗ್ಯ ಯೋಜನೆಯಡಿ ನಿವೇಶನ ಹಾಗೂ ಮನೆ ಒದಗಿಸುವ ಕೆಲಸವಾಗುತ್ತಿದೆ. ನೇರ ಪಾವತಿ, ಒಳಚರಂಡಿ ಪೌರಕಾರ್ಮಿಕರು, ಲೋಡರ್, ಕ್ಲೀನರ್ ಹಾಗೂ ವಾಹನ ಚಾಲಕರಿಗೂ ಸಹ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಶ್ರಮಿಸಿ ನಗರದ ನೈರ್ಮಲ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡುವಲ್ಲಿ  ಪ್ರಮುಖ ಪಾತ್ರ ವಹಿಸುತ್ತಾರೆ. ಇವರಿಗೂ ಸಹ ಮನೆ ನಿರ್ಮಾಣಕ್ಕಾಗಿ ರಾಜೀವ್ ಗಾಂಧಿ ವಸತಿ ನಿಗಮ ಅಥವಾ ಸರ್ಕಾರದ ಇತರ ವಸತಿ ಯೋಜನೆಗಳ ಅಡಿಯಲ್ಲಿ ವಿಶೇಷ ಅನುದಾನ ಹಾಗೂ ಮನೆ ಮಂಜೂರಾತಿ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.Create mysore labor

ಡಾ. ಬಿ.ಆರ್. ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನದ ಸವಿನೆನಪಿಗಾಗಿ ನವೆಂಬರ್ 7  ರಂದು  ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೌರಕಾರ್ಮಿಕರಿಗೆ ಹಾಗೂ ಚಾಲಕರಿಗೆ ಯಾವುದೇ ರೀತಿಯ ಕಿರುಕುಳವಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮೇಸ್ತ್ರಿಗಳು ಅಥವಾ ಅಧಿಕಾರಿಗಳು ತೊಂದರೆ ನೀಡಿದರೆ ಪಾಲಿಕೆ ಆಯುಕ್ತರಿಗೆ ದೂರು ನೀಡಿ, ಅಲ್ಲಿ ಪರಿಹಾರ ಸಿಗದಿದ್ದರೆ ಆಯೋಗವು ಕಠಿಣ ಕ್ರಮ ಜರುಗಿಸಲಿದೆ ಎಂದು ಹೇಳಿದರು.

ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಅವರು ಮಾತನಾಡಿ  ಕಾರ್ಮಿಕರು ತಮ್ಮ ಕುಂದುಕೊರತೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ‘ಸಿಂಗಲ್ ವಿಂಡೋ’ ವ್ಯವಸ್ಥೆ ಮಾಡಲಾಗಿದೆ. ಪ್ರಥಮ ಹಂತದಲ್ಲಿ ಪರಿಸರ ಅಭಿಯಂತರರು ಹಾಗೂ ಹೆಲ್ತ್ ಇನ್‌ಸ್ಪೆಕ್ಟರ್ ಗಳಿಗೆ ದೂರು ನೀಡಬಹುದು. ಅಲ್ಲಿ ಬಗೆಹರಿಯದಿದ್ದರೆ  ಹೆಚ್ಚುವರಿ ಆಯುಕ್ತರ ಹಂತದಲ್ಲಿ ಪರಿಹರಿಸಲು ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ ಎಂದು ಹೇಳಿದರು.awareness MK Savitha PT3

ಸಭೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸಂಶೋಧನಾಧಿಕಾರಿ ಮಹದೇವಸ್ವಾಮಿ, ಕಾರ್ಯದರ್ಶಿ ರಘು, ರಾಜೇಂದ್ರ, ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತೆ ವೀಣಾ ಸೇರಿದಂತೆ‌ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.segregating jk02

 

English Summary
Title

Create awareness about segregating wet and dry waste at the source – C. Shankar Ankanashettipura

Short Description
C. Shankara Ankanashettipura, a member of the Karnataka State Safai Karamchari Commission, stated that awareness must be created among the public to segregate wet and dry waste before handing it over to the civic workers. He held a progress review meeting today at the Mysuru City Corporation hall. Initially, he interacted with the civic workers and gathered information regarding the difficulties they face.
Keywords
Create, awareness, segregating, wet, dry, waste, C. Shankara Ankanashettipura, Mysore