Monday, September 21, 2026

BDA Apartments

Former MLA BDA JK_Adv BDA Adv
Home Front Page ಮಾಜಿ ಶಾಸಕ ಡಾ. ಆರ್.ಬಿ.ಶಿರಿಯಣ್ಣವರ ಸರಳ ಸಜ್ಜನ ರಾಜಕಾರಣಿ- ಸಿಎಂ ಡಿಕೆಶಿ ಸ್ಮರಣೆ

ಮಾಜಿ ಶಾಸಕ ಡಾ. ಆರ್.ಬಿ.ಶಿರಿಯಣ್ಣವರ ಸರಳ ಸಜ್ಜನ ರಾಜಕಾರಣಿ- ಸಿಎಂ ಡಿಕೆಶಿ ಸ್ಮರಣೆ

ಬೆಂಗಳೂರು,ಸೆಪ್ಟಂಬರ್‌,21,2026 (www.justkannada.in) ಮಾಜಿ ಶಾಸಕ ಡಾ. ಆರ್.ಬಿ.ಶಿರಿಯಣ್ಣವರ ಸರಳ ವ್ಯಕ್ತಿ, ಸಜ್ಜನ ಅಪರೂಪದ ರಾಜಕಾರಣಿಯಾಗಿದ್ದರು’ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಮರಿಸಿದರು.

ಸೋಮವಾರ ಆರಂಭವಾದ ವಿಶೇಷ ಅಧಿವೇಶನದಲ್ಲಿ ವಿಧಾನಸಭೆಯ ಸಂತಾಪ ಸೂಚಕ ನಿರ್ಣಯದ ಮೇಲೆ ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಡಾ. ಆರ್.ಬಿ.ಶಿರಿಯಣ್ಣವರ ಬಗ್ಗೆ ಸಿಎಂ  ಡಿಕೆ ಶಿವಕುಮಾರ್‌ ಮಾತನಾಡಿದರು.

‘ಡಾ. ಆರ್.ಬಿ.ಶಿರಿಯಣ್ಣವರ ನಿಧನದಿಂದ ತುಂಬಲಾರದ ನಷ್ಟವಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಜನಿಸಿ 2004ರಲ್ಲಿ ನವಲಗುಂದ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆರ್.ಬಿ.ಶಿರಿಯಣ್ಣವರ ತಮ್ಮ ಜನಪರ ಕಾರ್ಯಗಳಿಂದ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು’ ಎಂದರು.Former MLA dks dks 8

‘ನಮ್ಮಿಬ್ಬರ ಪಕ್ಷ ಬೇರೆ ಇರಬಹುದು. ಅವರೊಂದಿಗೆ ನಾನು ವಿಧಾನಸಭೆ ಸದಸ್ಯನಾಗಿದ್ದೆ.  ಮೃತರ ಆತ್ಮಕ್ಕೆ ಶಾಂತಿಸಿಗಲಿ, ಅನುಯಾಯಿಗಳು, ಬಂಧುಮಿತ್ರರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ’ ಎಂದು ಸಿಎಂ ಪ್ರಾರ್ಥಿಸಿದರು.Dr. R.B. Shiriyannavar jk02

Key words: Former MLA, Dr. R.B. Shiriyannavar, simple, upright politician, CM DK Shivakumar

English Summary
Title

Karnataka Assembly Session: CM DK Shivakumar Pays Tribute to Late MLA Dr. RB Shiriyannavar Amid Vande Mataram Row

Short Description
During a special Karnataka assembly session, Chief Minister DK Shivakumar paid an obituary tribute to the late former MLA Dr. RB Shiriyannavar, an upright politician and former doctor who served Navalgund. The solemn tribute intersected with a political flashpoint as a government recording of Vande Mataram was cut short after two stanzas. Opposing BJP and JD(S) lawmakers immediately staged a protest, rising to recite the national song in its entirety before legislative discussions commenced.
Keywords
Former MLA, Dr. R.B. Shiriyannavar, simple, upright politician, CM DK Shivakumar