Monday, September 21, 2026

BDA Apartments

accepted BDA JK_Adv BDA Adv
Home Front Page ಒಬ್ಬ ನಿರಪರಾಧಿಯ ರಾಜೀನಾಮೆ ಪಡೆದಿದ್ದೇನೆ- ಸಿಎಂ ಡಿಕೆ ಶಿವಕುಮಾರ್‌

ಒಬ್ಬ ನಿರಪರಾಧಿಯ ರಾಜೀನಾಮೆ ಪಡೆದಿದ್ದೇನೆ- ಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು,ಸೆಪ್ಟಂಬರ್‌,21,2026 (www.justkannada.in) ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ ಆರಂಭವಾಗಿದ್ದು ಈ ಮಧ್ಯೆ ಸಿಎಂ ಡಿಕೆ ಶಿವಕುಮಾರ್‌ ಅವರು ಮಾಜಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆದ ವಿಚಾರವನ್ನ ಪ್ರಸ್ತಾಪಿಸಿದರು.

ಅಧಿವೇಶನದಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್‌,  ಒಬ್ಬ ನಿರಪರಾಧಿಯ ರಾಜೀನಾಮೆ ಪಡೆದಿದ್ದೇನೆ.  ಬಿ. ನಾಗೇಂದ್ರ ರಾಜೀನಾಮೆ ನೀಡಿದ ಬಳಿಕವೂ ಬಿಜೆಪಿ ಪಾದಯಾತ್ರೆ ಮಾಡಿದೆ ಎಂದರು.

ಬಿ. ನಾಗೇಂದ್ರ ಅವರು ನಿರಪರಾಧಿಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣದಿಂದ ಸ್ವಯಂಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರು.accepted session

ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮುಂಗಾರು ಅಧಿವೇಶನದಲ್ಲಿ ವಿಪಕ್ಷ ಬಿಜೆಪಿ ಧರಣಿ ನಡೆಸಿ ನಾಗೇಂದ್ರ ಅವರ ರಾಜೀನಾಮಗೆ ಪಟ್ಟು ಹಿಡಿದಿತ್ತು. ಈ ನಂತರ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.B.Nagendra jk02

 

English Summary
Title

I have accepted the resignation of an innocent person – CM DK Shivakumar.

Short Description
A special three-day session of the legislature began today; amidst this, the issue of former Minister B. Nagendra's resignation was raised. Speaking during the session, CM D.K. Shivakumar stated that he had accepted the resignation of an innocent man, noting that the BJP had proceeded with its *padayatra* (march) even after B. Nagendra had resigned.
Keywords
accepted, B.Nagendra, resignation, innocent, person, CM DK Shivakumar.