ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಕೋವಿಡ್ ಸೋಂಕು ದೃಢ.

Promotion

ಬೆಂಗಳೂರು,ಜನವರಿ,13,2022(www.justkannada.in):  ಕೊರೊನಾ ಹೆಚ್ಚುತ್ತಿರುವ ನಡುವೆಯೂ ಸರ್ಕಾರಕ್ಕೆ ಸೆಡ್ಡು ಹೊಡೆದು ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದು, ಈ ಮಧ್ಯೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಲವು ನಾಯಕರಿಗೆ ಕೊರೋನಾ ಸೋಂಕು ತಗುಲಿದೆ.

ಮಾಜಿ ಸಚಿವ ಹೆಚ್.ಎಂ ರೇವಣ್ಣ, ಸಿಎಂ ಇಬ್ರಾಹಿಂ ಸೇರಿ ಹಲವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಕೋವಿಡ್ ಸೋಂಕು ದೃಢವಾಗಿದ್ದು ಬೆಂಗಳೂರಿನ ನಿವಾಸದಲ್ಲಿ ಐಸೋಲೇಷನ್ ಆಗಿದ್ದಾರೆ.

ಮಲ್ಲಿಕಾರ್ಜಿನ ಖರ್ಗೆ ಅವರು ಪಾದಯಾತ್ರೆಯ  ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಇದೀಗ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ. ಇನ್ನು ಖರ್ಗೆ ಅವರ ದೆಹಲಿ ಕಚೇರಿಯ ಐವರು ಸಿಬ್ಬಂದಿಗೂ ಸೋಂಕು ತಗುಲಿದೆ ಎನ್ನಲಾಗಿದೆ.

Key words: Congress leader-Mallikarjun Kharge-  covid positive

ENGLISH SUMMARY…

Veteran Cong. leader Kharge tests COVID positive
Bengaluru, January 13, 2022 (www.justkannada.in): Several Congress party leaders who participated in the Mekedatu project padayatra have tested Corona positive.
Earlier former Ministers H.M. Revanna, C.M. Ibrahim tested Corona positive. Now senior Congress leader Mallikarjun Kharga also has tested positive and has been quarantined in his Bengaluru residence.
Mallikarjun Kharge had taken part in the inaugural program of the padayatra. Five of his New Delhi office staff have also reportedly tested positive.
Keywords: Congress/ Mallikarjun Kharge/ tests COVID positive