Thursday, November 5, 2026

Dasara Wishes

Happy Dasara
Home Front Page “ಮೊಬೈಲ್ ಕಳ್ಳನ ಬಂಧನ, 70ಸಾವಿರ ರೂ. ಮೌಲ್ಯದ 2 ಮೊಬೈಲ್ ಫೋನ್ ವಶ”

“ಮೊಬೈಲ್ ಕಳ್ಳನ ಬಂಧನ, 70ಸಾವಿರ ರೂ. ಮೌಲ್ಯದ 2 ಮೊಬೈಲ್ ಫೋನ್ ವಶ”

ಮೈಸೂರು,ಫೆಬ್ರವರಿ,14,2021(www.justkannada.in) : ಮೊಬೈಲ್ ಕಳ್ಳನನ್ನು ಬಂಧಿಸಿ 70 ಸಾವಿರ ರೂ. ಮೌಲ್ಯದ 2 ಮೊಬೈಲ್ ಫೋನ್ ಗಳನ್ನು(ಓನ್ ಪ್ಲಸ್ 7 ಪ್ರೋ ಮತ್ತು ಒನ್ ಪ್ಲಸ್ ನಾರ್ಡ್) ವಶಪಡಿಸಿಕೊಳ್ಳಲಾಗಿದೆ.jkಕುವೆಂಪುನಗರದ ನಿವಾಸಿಯೊಬ್ಬರು ರಾತ್ರಿ ಎರಡು ಫೋನ್ ಗಳನ್ನು ಕಿಟಕಿ ಪಕ್ಕದಲ್ಲಿ ಚಾರ್ಜ್ ಮಾಡಲು ಇಟ್ಟು ಮಲಗಿದ್ದಾರೆ. ಬೆಳಗ್ಗೆ ಎದ್ದು ನೋಡಲಾಗಿ ಕಿಟಕಿ ತೆರೆದಿದ್ದು, ಮೊಬೈಲ್ ಫೋನ್ ಗಳು ಕಳ್ಳತನವಾಗಿದೆ. ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಸರಸ್ವತಿಪುರಂ ಪೊಲೀಸರು ಆರೋಪಿ ಕೆ.ಜಿ.ಕೊಪ್ಪಲಿನ ಅಕ್ಷಯ್ ಬಿನ್ ಲೇಟ್ ಶಿವಕುಮಾರ್(19) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕಿಟಕಿಯ ಮೂಲಕ ಕೈ ಹಾಕಿ ಮೊಬೈಲ್ ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ 70ಸಾವಿರ ರೂ. ಮೌಲ್ಯದ 2 ಮೊಬೈಲ್ ಫೋನ್ ಗಳನ್ನು(ಓನ್ ಪ್ಲಸ್ 7 ಪ್ರೋ ಮತ್ತು ಒನ್ ಪ್ಲಸ್ ನಾರ್ಡ್) ವಶಪಡಿಸಿಕೊಳ್ಳಲಾಗಿದೆ.  

ಈ ಪತ್ತೆ ಕಾರ್ಯದಲ್ಲಿ ಮೈಸೂರು ನಗರದ ಡಿಸಿಪಿ ಗೀತಾಪ್ರಸನ್ನ, ಎ.ಸಿ.ಪಿ.ಕೃಷ್ಣರಾಜ ವಿಭಾಗ ಎಂ.ಎಸ್.ಪೂರ್ಣಚಂದ್ರ ತೇಜಸ್ವಿ, ಸರಸ್ವತಿಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಸಿ.ತಿಮ್ಮರಾಜು, ಪಿ.ಎಸ್.ಐ ರಾಚಯ್ಯ ಇತರರು ಭಾಗವಹಿಸಿದ್ದರು.

key words : Mobile-thief-detained-70,000-2 mobile phones-possession