Tuesday, August 4, 2026

BDA Apartments

Home Front Page ನವ ಜೀವನಕ್ಕೆ ಕಾಲಿಟ್ಟ ಡಿಕೆಶಿ ಪುತ್ರಿ ಐಶ್ವರ್ಯ-ಅಮರ್ತ್ಯ: ನವಜೋಡಿಗೆ ಶುಭ ಹಾರೈಸಿದ ಗಣ್ಯಾತಿಗಣ್ಯರು…

ನವ ಜೀವನಕ್ಕೆ ಕಾಲಿಟ್ಟ ಡಿಕೆಶಿ ಪುತ್ರಿ ಐಶ್ವರ್ಯ-ಅಮರ್ತ್ಯ: ನವಜೋಡಿಗೆ ಶುಭ ಹಾರೈಸಿದ ಗಣ್ಯಾತಿಗಣ್ಯರು…

ಬೆಂಗಳೂರು,ಫೆಬ್ರವರಿ,14,2021(www.justkannada.in): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಮೊಮ್ಮಗ ಅಮರ್ತ್ಯ  ಇಂದು ಪ್ರೇಮಿಗಳ ದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.jk

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಐಶ್ವರ್ಯ –ಅಮರ್ತ್ಯ ಅವರ ವಿವಾಹ ಮಹೋತ್ಸವ ನೆರವೇರಿತು. ದ್ವಾರಕನಾಥ್ ಗುರೂಜಿ ಅವರ ಪೌರಾಹಿತ್ಯದಲ್ಲಿ ಇಬ್ಬರು ಹಸಮಣೆ ಏರಿದರು. ವಿವಾಹ ಮಹೋತ್ಸವದಲ್ಲಿ ಆಪ್ತರು, ಬಂದು ಬಳಗದವರು, ರಾಜಕೀಯ ನಾಯಕರು, ಸ್ವಾಮೀಜಿಗಳು ಉಪಸ್ಥಿತರಿದ್ದು ನವಜೋಡಿಗೆ ಶುಭ ಹಾರೈಸಿದರು.

ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಸಿದ್ಧರಾಮಯ್ಯ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಡಿಸಿಎಂ ಪರಮೇಶ್ವರ್,  ಸಚಿವ ವಿ.ಸೋಮಣ್ಣ, ಆರ್.ವಿ ದೇಶಪಾಂಡೆ, ಶಾಸಕ ಮುನಿರತ್ನ, ಹೆಚ್.ಕೆ ಮುನಿಯಪ್ಪ ಶುಭಹಾರೈಸಿದರು.dk shivakumar- Daughter- Aishwarya-Amartya - marriage

ಹಾಗೆಯೇ ಆದಿಚುಂಚನಗಿರಿ ಮಠದ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿಗಳು, ವಿನಿಯ್ ಗುರೂಜಿ ಸೇರಿ ಹಲವು ಮಠದ ಶ್ರೀಗಳು ನವಜೋಡಿಗೆ ಆಶೀರ್ವಾದಿಸಿದರು.

Key words: dk shivakumar- Daughter- Aishwarya-Amartya – marriage