ರಾಯಚೂರು,ಸೆಪ್ಟಂಬರ್,19,2026 (www.justkannada.in): ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ನಿಂದ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಚರಣ್ ಕುಮಾರ್(14), ಸುಚಿತ್ ಕುಮಾರ್(16), ಮೃತ ಬಾಲಕರು. ರಾಯಚೂರು ನಗರದ ಎಂ.ಈರಣ್ಣ ವೃತ್ತದ ಬಳಿ ನಡೆದಿದೆ. ಇನ್ನೂ ವಿಜಯ್ ಕುಮಾರ್ ಗೆ ಗಂಭೀವಾದ ಗಾಯಗಳಾಗಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತಡರಾತ್ರಿ ಟ್ರಾಕ್ಟರ್ ನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಸಲಾಗುತ್ತಿತ್ತು. ಟ್ರಾಕ್ಟರ್ ಇಂಜಿನ್ ಬಳಿ ಚಾಲಕನ ಪಕ್ಕ ಮೂವರು ಕುಳಿತಿದ್ದರು. ರೋಡ್ ಹಂಪ್ಸ್ ದಾಟುವ ವೇಳೆ ಟ್ರಾಕ್ಟರ್ ಚಾಲಕನ ನಿರ್ಲಕ್ಷ ತೋರಿದ್ದು ವೇಗವಾಗಿ ಬಂದು ರೋಡ್ ಹಂಪ್ಸ್ ಎಗರಿಸಿದ ಹಿನ್ನೆಲೆ, ಈ ವೇಳೆ ಕೆಳಗೆ ಬಿದ್ದ ಇಬ್ಬರ ಬಾಲಕರ ಮೇಲೆ ಟ್ರಾಕ್ಟರ್ ಹರಿದು ಈ ದುರ್ಘಟನೆ ನಡೆದಿದೆ. ಈ ಕುರಿತು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Mishap, during, Ganesha immersion, Two boys, die, Raichur






