ಶಾಹೀದ್ ಕಪೂರ್ ಜತೆ ನಟಿಸಲು ರಶ್ಮಿಕಾ ರೆಡಿ !

ಬೆಂಗಳೂರು, ಸೆಪ್ಟೆಂಬರ್ 26, 2019 (www.justkannada.in): ತೆಲುಗಿನ ಸೂಪರ್ ಹಿಟ್ ಸಿನಿಮಾ ಜೆರ್ಸಿ, ಹಿಂದಿಯಲ್ಲಿ ರೀಮೇಕ್ ಆಗುತ್ತಿದೆ. ಚಿತ್ರದಲ್ಲಿ ಶಾಹೀದ್ ಕಪೂರ್ ಜೊತೆ ರಶ್ಮಿಕಾ ನಾಯಕಿಯಾಗುವ ಸಾಧ್ಯತೆ ಇದೆ.

ಈ ಮಧ್ಯೆ ರಶ್ಮಿಕಾ ಬಾಲಿವುಡ್ ಎಂಟ್ರಿ ಬಗ್ಗೆ ಇನ್ನೊಂದು ಸುದ್ದಿ ಹೊರಬಿದ್ದಿದೆ. ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಜೊತೆ ಬಿಟೌನ್ ಪ್ರವೇಶಿಸಲಿದ್ದಾರಂತೆ ಕೊಡಗಿನ ಕುವರಿ.

ಮಹೇಶ್ ಬಾಬು ಮತ್ತು ರಶ್ಮಿಕಾ ಮಂದಣ್ಣ ನಟಿತ್ತಿರುವ ತೆಲುಗು ಸಿನಿಮಾ ಸರೈನೋಡು ಈಗ ಹಿಂದಿಯಲ್ಲೂ ಬಿಡುಗಡೆಯಾಗಲಿದೆಯಂತೆ. ಪ್ಯಾನ್ ಇಂಡಿಯಾ ಕಾನ್ಸಪ್ಟ್ ನಲ್ಲಿ ಈ ಚಿತ್ರವನ್ನ ತೆರೆಗೆ ತರುವ ಚಿಂತನೆ ಮಾಡಲಾಗಿದೆಯಂತೆ. ಆದರೆ ಶಾಹೀದ್ ಕಪೂರ್ ಜತೆಗಿನ ಸಿನಿಮಾ ಕುರಿತು ಅಧಿಕೃತವಾಗಿ ಪ್ರಕಟವಾಗಿಲ್ಲ.