ಉಪಚುನಾವಣೆ: ಶಿರಾ ಕ್ಷೇತ್ರಗಿಂತ ಆರ್.ಆರ್ ನಗರದಲ್ಲಿ ಕಡಿಮೆ ಮತದಾನ…

ಬೆಂಗಳೂರು,ನವೆಂಬರ್,3,2020(www.justkannada.in): ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಾದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರಕ್ಕೆ  ಮತದಾನ ನಡೆಯುತ್ತಿದ್ದು ಮಧ್ಯಾಹ್ನ ಮೂರುಗಂಟೆಯವರೆಗೆ ನಡೆದಂತ ಮತದಾನದಲ್ಲಿ ಶಿರಾ ಕ್ಷೇತ್ರದಲ್ಲಿ ಶೇ.61.1 ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಶೇ.32,41ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.jk-logo-justkannada-logo

 ಶಿರಾ ಹಾಗೂ ರಾಜರಾಜೇಶ್ವರಿನಗರ ಉಪ ಚುನಾವಣೆಯ ಮತದಾನದ  ಪ್ರಮಾಣದ ಮಾಹಿತಿಯನ್ನ ಚುನಾವಣಾ ಆಯೋಗ ಪ್ರಕಟಿಸಿದೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಶಿರಾ ವಿಧಾನಸಭಾ ಉಪ ಚುನಾವಣೆಯಲ್ಲಿ ಶೇ.61.1ರಷ್ಟು ಮತದಾನವಾಗಿದೆ.by-election-rr-nagar-shira-constituency-voting

ಇನ್ನು ತೀವ್ರ ಕುತೂಹಲ ಕೆರಳಿಸಿರುವ ಆರ್.ಆರ್ ನಗರ ಕ್ಷೇತ್ರದಲ್ಲಿ ಶಿರಾ ಕ್ಷೇತ್ರಗಿಂತ ಕಡಿಮೆ ಮತದಾನವಾಗಿದೆ. 3 ಗಂಟೆಯ ವೇಳೆಗೆ ಶೇ.32.41ರಷ್ಟು ಮತದಾನವಾಗಿದೆ. ಇನ್ನು ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ಆರ್. ಆರ್ ನಗರ ಕ್ಷೇತ್ರದ ಅಭ್ಯರ್ಥಿಗಳು ಮತದಾರರ ಬಳಿ ಮನವಿ ಮಾಡಿದ್ದಾರೆ.

Key words: By-election-RR nagar – Shira- constituency-voting