ಹೆಚ್.ಡಿಕೆ  ಲಾಟರಿ ಹೊಡೆದು 2 ಬಾರಿ ಸಿಎಂ ಆಗಿದ್ರು- ಸಚಿವ ವಿ.ಸೋಮಣ್ಣ ವ್ಯಂಗ್ಯ…

ಬೆಂಗಳೂರು,ನ,29,2019(www.justkannada.in): ತಾವು ಕಣ್ಣೀರು ಹಾಕಿದ್ದ ಕುರಿತು ಲೇವಡಿ ಮಾಡಿದ್ದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರಿಗೆ ನಾನೇನು ನಿಮ್ಮಂತೆ ಹಲ್ಲು ಬಿಟ್ಟುಕೊಂಡು ನಿಂತಿಲ್ಲ ಎಂದು ತಿರುಗೇಟು ನೀಡಿದ್ದ ಹೆಚ್.ಡಿ ಕುಮಾರಸ್ವಾಮಿಗೆ ವಸತಿ ಸಚಿವ ವಿ.ಸೋಮಣ್ಣ ಟಾಂಗ್ ನೀಡಿದ್ದಾರೆ.

ಡಿ.ವಿ ಸದಾನಂದಗೌಡರು ನಿಷ್ಕಲ್ಮಶ ರಾಜಕಾರಣಿ. ಹೆಚ್.ಡಿ ಕುಮಾರಸ್ವಾಮಿ ಲಾಟರಿ ಸಿಎಂ ಎಂದು ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ವಿ.ಸೋಮಣ್ಣ,  ಹೆಚ್.ಡಿ ಕುಮಾರಸ್ವಾಮಿ ಲಾಟರಿ ಹೊಡೆದು ಎರಡು ಬಾರಿ ಸಿಎಂ ಆಗಿದ್ದರು. ಹೆಚ್.ಡಿಕೆ ಹಿಟ್ ಅಂಡ್ ರನ್ ಮಾಡ್ತಾರೆ. ಮನೆ ಇಲ್ಲದಕ್ಕೆ ಹೋಟೆಲ್ ನಲ್ಲಿದ್ದೆ ಎಂದು ಹೇಳುತ್ತಾರೆ. ಹೆಚ್.ಡಿಕೆ ಮಾತನ್ನ ಯಾರಾದ್ರೂ ನಂಬುತ್ತಾರೆಯೇ..? ಜನರಿಗೆ ಟೋಪಿ ಹಾಕುವ ಕೆಲಸವನ್ನ ಮಾಡಬೇಡಿ ಎಂದು ಚಾಟಿ ಬೀಸಿದರು.

ಹೆಚ್.ಡಿ ಕುಮಾರಸ್ವಾಮಿಯದ್ದು ಕಣ್ಣೀರು ಹಾಕುವುದು. ಭವಿಷ್ಯ ಹೇಳುವುದು ಎರಡೇ ಕೆಲಸ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ಹೆಚ್.ಡಿ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ವ್ಯಂಗ್ಯವಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಾನೇನು ನಿಮ್ಮಂತೆ ಹಲ್ಲು ಬಿಟ್ಟುಕೊಂಡು ನಿಂತಿಲ್ಲ. ಜನರ ಕಷ್ಟ ನೋಡಿ ಕಣ್ಣೀರು ಬರುತ್ತದೆ ಎಂದು ಟಾಂಗ್ ನೀಡಿದ್ದರು.

Key words: 2 times- CM – HD Kumaraswamy- lottery- Minister -V. Somanna