ಹುಣಸೂರಿನಲ್ಲಿ 2 ಕೋಟಿ ವಶಕ್ಕೆ ಪಡೆದ ವಿಚಾರ:  ಈ ಹಣ ಯಾರದ್ದು ಅಂತಾ ಮಿ. ಕ್ಲೀನ್ ವಿಶ್ವನಾಥ್ ಹೇಳಲಿ -ಮಾಜಿ ಸಚಿವ ಸಾ.ರಾ ಮಹೇಶ್ ಟಾಂಗ್….

ಮೈಸೂರು,ನ,28,2019(www.justkannada.in):  ಹೆಚ್.ವಿಶ್ವನಾಥ್ ಅವರೇ ನನ್ನ ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ಮಾತನಾಡ್ತೀರಿ. ನಾಳೆ ನಿಮ್ಮ ರಿಯಲ್ ಎಸ್ಟೇಟ್ ಬಗ್ಗೆ ದಾಖಲೆಯನ್ನ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಟಾಂಗ್ ನೀಡಿದರು.

ಹುಣಸೂರಿನಲ್ಲಿ ಇಂದು ಮಾತನಾಡಿದ ಸಾ.ರಾ ಮಹೇಶ್, ಹುಣಸೂರಿನಲ್ಲಿ ಕೋಟಿ ವಶಕ್ಕೆ ಪಡೆದ ವಿಚಾರ. ಈ ಹಣ ಯಾರದ್ದು ಎಂದು ಮಿ.ಕ್ಲೀನ್ ವಿಶ್ವನಾಥ್ ಹೇಳಲಿ. ಮೊದಲು ಸಾಲ ಇದೆ ಎಂದು ಹೇಳಿದ್ದರು. ಆದರೆ ಚುನಾವಣಾ ಅಫಿಡೆವಿಟ್ ನಲ್ಲಿ ಸಾಲದ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ ಅವರೇನು ಬಾಂಬೆಯಿಂದ ಹಣ ತಂದು ಸಾಲ ತೀರಿಸಿದ್ರಾ ಎಂದು ಪ್ರಶ್ನಿಸಿದರು.

ನನ್ನ ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ಮಾತನಾಡ್ತೀರಿ. ನಾಳೆ ನಿಮ್ಮ ರಿಯಲ್ ಎಸ್ಟೇಟ್ ಬಗ್ಗೆ ದಾಖಲೆಯನ್ನ ಬಿಡುಗಡೆ ಮಾಡುತ್ತೇನೆ. ಸಾಮಾಜಿಕ ಬದುಕಿನಲ್ಲಿ ನೀವು ಕ್ಲೀನ್ ಇಲ್ಲ ಎಂದು ಮಾಜಿ ಸಚಿವ ಸಾ.ರಾ ಮಹೇಶ್  ವಾಗ್ದಾಳಿ ನಡೆಸಿದರು.

Key words: hunsur- 2 crore- seize-former minister- sara Mahesh-bjp candidate- h.vishwanath