ಬಿಜೆಪಿಗೆ ಬರಲು ಮೊದಲು ನನಗೆ ಆಫರ್ ನೀಡಿದ್ದರು ಎಂಬ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಕುರಿತು ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು ಹೀಗೆ…

ಬೆಳಗಾವಿ,ನ,28,2019(www.justkannada.in): ವಿಧಾನಸಭೆ ಚುನಾವಣಾ ಫಲಿತಾಂಶ ಬಂದ ಒಂದು ವಾರದಲ್ಲೇ ಹೈದರಾಬಾದ್ ನಲ್ಲಿ ಸಭೆ ನಡೆಸಿ ಅಪರೇಷನ್ ಕಮಲಗೆ ಯತ್ನಿಸಿದ್ದರು. ನನಗೆ ಮೊದಲು ಬಿಜೆಪಿಗೆ ಹೋಗಲು ಆಫರ್ ನೀಡಿದ್ದರು ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಬಿಜೆಪಿಗೆ ಬರುವಂತೆ ನಾನು ಲಕ್ಷ್ಮೀ ಹೆಬ್ಬಾಳ್ಕರ್ ರನ್ನ ಕರೆದಿಲ್ಲ.  ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು ಎಂದು ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

ಇಂದು ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ರಮೇಶ್ ಜಾರಕಿಹೊಳಿ, ಬಿಜೆಪಿಗೆ ಬರುವಂತೆ  ನನ್ನನ್ನೂ ಆಹ್ವಾನಿಸಿದ್ದರು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ನಿನ್ನೆ ಅವರು ನೀಡಿರುವ ಹೇಳಿಕೆ ಕೇಳಿ ಶಾಕ್ ಆದೆ.ಕಾಂಗ್ರೆಸ್ ಹಾಳಾಗಲು ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ ಎಂದು ಗುಡುಗಿದರು.

ಸಮ್ಮಿಶ್ರ ಸರ್ಕಾರ ಯಾಕೆ ಬೀಳಿತು. ಯಾರಿಂದ ಬಿತ್ತು ಎಂಬುದರ ಬಗ್ಗೆ ಅದರ ಹಿಂದಿನ ಕಾರಣ ಕುರಿತು ಡಿಸೆಂಬರ್ 5  ಅಥವಾ 6ರ ಬಳಿಕ ಪತ್ರಿಕಾಗೋಷ್ಠಿ ನಡೆಸಿ  ಬಹಿರಂಗಪಡಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

Key words: belagavi- ramesh jarkiholi- Congress –mla-lakshmi hebbalkar