ನಾನು ಹನುಮಂತ ಅಲ್ಲ ಸ್ವಾಮಿ: ಹೃದಯ ಬಗೆದು ತೋರಿಸಲು ಸಾಧ್ಯವಿಲ್ಲ- ಹೆಚ್.ಡಿ ದೇವೇಗೌಡರ ಹೇಳಿಕೆಗೆ ಹೆಚ್.ವಿಶ್ವನಾಥ್ ಪ್ರತಿಕ್ರಿಯೆ…

0
360

ಮೈಸೂರು,ನ,28,2019(www.justkannada.in):  ನನ್ನ ಫೋಟೋ ದೇವರ ಮನೆಯಲ್ಲಿ‌ ಇರಬಹುದು, ನಾನು ಹೃದಯದಲ್ಲಿ ಇದ್ದೀನಾ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕೇಳಿರುವ ಪ್ರಶ್ನೆ  ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್, ನಾನು ಹನುಮಂತ ಅಲ್ಲ ಸ್ವಾಮಿ. ಹೃದಯ ಬಗೆದು ತೋರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹುಣಸೂರು ತಾಲೂಕಿನ ರಾಮಾಪುರದಲ್ಲಿ  ಇಂದು ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್, ನಾನು ದೇವೇಗೌಡರ ಮೇಲೆ ಅಪಾರ ಪ್ರೀತಿ, ಗೌರವ ಹೊಂದಿದ್ದೇನೆ. ದೇವೇಗೌಡರು ಏನೇ ಹೇಳಲಿ. ನಾನು ಅವರ ಬಗ್ಗೆ ಹೊಂದಿರುವ ಗೌರವ ಕಡಿಮೆ ಆಗುವುದಿಲ್ಲ. ಅದು ಹೀಗೆಯೇ ಇರುತ್ತದೆ. ನನ್ನ ಬಗ್ಗೆ ಅವ್ರು ಏನೇ ಹೇಳಿದ್ರು, ಅದು ನನಗೆ ಆಶೀರ್ವಾದ ಎಂದು ನುಡಿದರು.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ನಾನು ಹೆಚ್.ಡಿ ಕುಮಾರಸ್ವಾಮಿ ಮನೆಗೆ ಹೋಗಿದ್ದು ತಿಂಡಿ ತಿಂದಿದ್ದು ನಿಜ. ಆ ಬಳಿಕ ತಾಜ್ ವೆಸ್ಟೆಂಡ್ ಗೆ ಶೀಫ್ಟ್ ಆಯ್ತು. ಅಮೇಲೆ ನಮಗೆಲ್ಲಾ ಅವಮಾನ ಶುರುವಾಯ್ತು . ನನ್ನನ್ನ ಮಂತ್ರಿ ಮಾಡಲು ಹೆಚ್.ಡಿ ದೇವೇಗೌಡರು, ಹೆಚ್.ಡಿ ಕುಮಾರಸ್ವಾಮಿಗೆ ಇಷ್ಟವಿತ್ತು. ಆದರೆ ಸಿದ್ಧರಾಮಯ್ಯಗೆ ಇಷ್ಟ ಇರಲಿಲ್ಲ, ಸಮ್ಮಿಶ್ರ ಸರ್ಕಾರದ ವೇಳೆ ಬೆಳಿಗ್ಗೆ 10.30ರ ವೇಳೆಗೆ ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿತ್ತು. ನಂತರ 11.30ರ ವೇಳೆಗೆ ನನ್ನ ಹೆಸರು ಡಿಲಿಟ್ ಆಗಿತ್ತು. ನಂತರ ನಾನು ಹೋಟೆಲ್ ಗೆ ಹೋಗಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಹೇಳಿದ್ದೆ. ನನಗೆ ಮಂತ್ರ ಸ್ಥಾನ ಬೇಡ. ನಿಮ್ಮ ಜತೆ ಸವಾಲುಗಳಿಗೆ ಎದುರು ನಿಲ್ಲುವಂತಹ ಜವಾಬ್ದಾರಿ ನೀಡಿ ಎಂದಿದ್ದೆ ಎಂದು ಕೇಳಿದ್ದೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

Key words: not Hanumantha -heart –hunsur-H.Vishwanath- response -HD Deve Gowda.