ಮಹೇಶ್ ಬಾಬು ಮೆಚ್ಚಿದ ‘ಪುಷ್ಪ’: ಥ್ಯಾಂಕ್ಸ್ ಎಂದ ಅಲ್ಲು ಅರ್ಜುನ್ !

ಬೆಂಗಳೂರು, ಜನವರಿ 08, 2022 (www.justkannada.in): ನಟ ಮಹೇಶ್​ ಬಾಬು ಇತ್ತೀಚೆಗೆ ‘ಪುಷ್ಪ’ ಚಿತ್ರ ವೀಕ್ಷಿಸಿದ್ದು, ಅಲ್ಲು ಅರ್ಜುನ್ ಹಾಗೂ ಚಿತ್ರ ತಂಡದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಹೌದು. ಕೊರೊನಾ ಸಂಕಷ್ಟ ಕಾಲದಲ್ಲೂ ವಿಶ್ವಾದ್ಯಂತ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿರುವ ಚಿತ್ರದ ಕುರಿತು ಸ್ಟಾರ್ ನಟನರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ಇದೀಗ ಮಹೇಶ್ ಬಾಬು ಕೂಡ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಪುಷ್ಪ’ ಸಖತ್​ ಇಷ್ಟ ಆಗಿದೆ ಎಂದು ಟ್ವೀಟ್ ಮಾಡಿರುವ ಸೂಪರ್ ಸ್ಟಾರ್, ಈ ಸಿನಿಮಾದಲ್ಲಿನ ಹಲವು ಅಂಶಗಳನ್ನು ಮೆಚ್ಚಿಕೊಂಡಿದ್ದಾರೆ.

ಅಲ್ಲು ಅರ್ಜುನ್​ ನಟನೆಯ ಪುಷ್ಪ ಚಿತ್ರ ಅಚ್ಚರಿ ಮೂಡಿಸುತ್ತದೆ, ಒರಿಜಿನಲ್​ ಮತ್ತು ಸೆನ್ಸೇಷನಲ್​ ಆಗಿದೆ. ನಟನೆ ಅದ್ಭುತವಾಗಿದೆ. ಸುಕುಮಾರ್​ ನಿರ್ದೇಶನದ ಸಿನಿಮಾಗಳು ಪ್ರಾಮಾಣಿಕವಾಗಿ ಮತ್ತು ರಾ ಆಗಿರುತ್ತವೆ ಎಂದು ಮಹೇಶ್ ಬಾಬು ಬರೆದುಕೊಂಡಿದ್ದಾರೆ.