ಬಾಲಿವುಡ್ ಮಂದಿ ಕಾಡುತ್ತಿರುವ ಕೋವಿಡ್: ನಟಿ ಸ್ವರಾ ಭಾಸ್ಕರ್’ಗೆ ಸೋಂಕು ದೃಢ

ಬೆಂಗಳೂರು, ಜನವರಿ 08, 2022 (www.justkannada.in): ಇತ್ತೀಚಿಗೆ ಒಬ್ಬರ ಮೇಲೊಬ್ಬರಂತೆ ಬಾಲಿವುಡ್ ನಟರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ.

ಈ ಸಾಲಿಗೆ ಹೊಸ ಸೇರ್ಪಡೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್‌. ಹೌದು. ಬಾಲಿವುಡ್ ನಟಿ ಸ್ವರಾ ಭಾಸ್ಕರ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ.

ನನಗೆ ಕೋವಿಡ್ ಸೋಂಕು ತಗುಲಿದೆ. ಜ.5 ರಿಂದ ಐಸೋಲೇಟ್ ಆಗಿದ್ದೇನೆ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ಸ್ವರಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಯಾರಾದರೂ ನನ್ನ ಸಂಪರ್ಕಕ್ಕೆ ಬಂದಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿ ಎಂದು ಸ್ವರಾ ಬಾಸ್ಕರ್ ಮಾಹಿತಿ ನೀಡಿದ್ದಾರೆ.