Saturday, August 8, 2026

BDA Apartments

Home Cinema ಕೈ ಪಾದಯಾತ್ರೆಗೆ ಸಿನಿಮಾ ಮಂದಿ ಬೆಂಬಲ ಕೋರಿದ ಡಿಕೆಶಿ

ಕೈ ಪಾದಯಾತ್ರೆಗೆ ಸಿನಿಮಾ ಮಂದಿ ಬೆಂಬಲ ಕೋರಿದ ಡಿಕೆಶಿ

ಬೆಂಗಳೂರು, ಜನವರಿ 08, 2022 (www.justkannada.in): ಪಾದಯಾತ್ರೆಗೆ ಬೆಂಬಲ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಲವು ಸಂಘ, ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಅಂತೆಯೇ ಚಿತ್ರೋದ್ಯಮದ ಬೆಂಬಲಕ್ಕೂ ಕೋರಿದ್ದಾರೆ.

ಮೇಕೆದಾಟು ಪಾದಯಾತ್ರೆಗೆ ಬೆಂಬಲ ನೀಡಬೇಕೆ? ಯಾವ ರೀತಿಯ ಬೆಂಬಲ ಎಂಬಿತ್ಯಾದಿ ವಿಷಯಗಳನ್ನು ಚರ್ಚಿಸಲು ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಿನಿಮಾ ಉದ್ಯಮದ ಪ್ರಮುಖರು ಸಭೆ ನಡೆಸಿದ್ದಾರೆ.

ಮೇಕೆದಾಟು ಯೋಜನೆಯ ಅಗತ್ಯವನ್ನು ಮನಗಂಡು ಯಾವುದೇ ಪಕ್ಷಕ್ಕೆ ಬೆಂಬಲ ನೀಡುವ ಬದಲಿಗೆ ಯೋಜನೆಯ ಅನುಷ್ಟಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಚಿತ್ರರಂಗದವರು ಯಾವ ದಿನವಾದರೂ ಸರಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು ಯಾರಿಗೂ ಒತ್ತಾಯವಿಲ್ಲ. ಆದರೆ ಎಲ್ಲರಿಗೂ ಮನವಿಯನ್ನಂತೂ ಮಾಡಲಾಗುತ್ತದೆ. ಕೊನೆಯ ದಿನದ ಕಾರ್ಯಕ್ರಮದಲ್ಲಿ ಒಟ್ಟಾಗಿ ಪಾಲ್ಗೊಂಡರೆ ಉತ್ತಮ ಎಂಬ ಸಲಹೆ ದಾಟಿಸಲಾಗಿದೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮಾಹಿತಿ ನೀಡಿದ್ದಾರೆ.