Thursday, September 10, 2026

BDA Apartments

Home Front Page BREAKING NEWS: ರಾಜ್ಯದಲ್ಲಿ ವಿದ್ಯುತ್‌ ಬಿಕ್ಕಟ್ಟು ; ಲೋಡ್‌ ಶೆಡ್ಡಿಂಗ್  ಆತಂಕ..!

BREAKING NEWS: ರಾಜ್ಯದಲ್ಲಿ ವಿದ್ಯುತ್‌ ಬಿಕ್ಕಟ್ಟು ; ಲೋಡ್‌ ಶೆಡ್ಡಿಂಗ್  ಆತಂಕ..!

Bengaluru, Sept. 10: Karnataka is facing power supply pressure due to poor rainfall, intense heat and rising electricity consumption. With temperatures rising, the use of ACs, coolers and fans has increased, pushing demand higher while power generation has declined, particularly from hydro sources. Thermal power generation at RTPS and BTPS is also under pressure. The situation may take 10–15 days to improve. Power interruptions are likely during the peak-demand period of 6:30 PM to 9 PM across different parts of the state.

 

ಬೆಂಗಳೂರು, ಸೆ.10: ಏಕಕಾಲಕ್ಕೆ ಮೂರು ವಿದ್ಯುತ್‌ ಉತ್ಫಾಧನಾ ಸ್ಥಾವರಗಳು ನಿರ್ವಹಣಾ ಕಾರಣದಿಂದ ಉತ್ಪಾಧನೆ ಸ್ಥಗಿತಗೊಂಡಿರುವ ಕಾರಣ ರಾಜ್ಯದಲ್ಲಿ ತಾತ್ಕಾಲಿಕ ವಿದ್ಯುತ್‌ ಅಭಾವ ಎದುರಾಗಿದೆ.

ಜತೆಗೆ ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಮುಂದುವರಿದ ಬಿಸಿಲಿನ ಬೇಗೆಯಿಂದ ವಿದ್ಯುತ್‌ ಬೇಡಿಕೆ ಗಣನೀಯವಾಗಿ ಹೆಚ್ಚಿದ್ದು, ಉತ್ಪಾದನೆ ಮತ್ತು ಬಳಕೆಯ ನಡುವೆ ಅಂತರ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಮುಂದಿನ 10ರಿಂದ 15 ದಿನಗಳ ಕಾಲ ಸಂಜೆ 6.30ರಿಂದ ರಾತ್ರಿ 9 ಗಂಟೆಯವರೆಗೆ ರಾಜ್ಯದ ವಿವಿಧೆಡೆ ವಿದ್ಯುತ್‌ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕೊರತೆ ಮುಂದುವರಿದಿದ್ದು, ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದೆ. ಇದರಿಂದ ಜಲವಿದ್ಯುತ್‌ ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ. ಇತ್ತೀಚಿನ ವರದಿಗಳ ಪ್ರಕಾರ, ರಾಜ್ಯದ 31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

 RTPS–BTPSನಲ್ಲಿ ಎಷ್ಟು ಉತ್ಪಾದನೆ?

ಕರ್ನಾಟಕ ರಾಜ್ಯ ಲೋಡ್‌ ಡಿಸ್ಪ್ಯಾಚ್‌ ಸೆಂಟರ್‌ನ ಇತ್ತೀಚಿನ ಮಾಹಿತಿಯ ಪ್ರಕಾರ, RTPSನ ಸ್ಥಾಪಿತ ಸಾಮರ್ಥ್ಯ 1,720 ಮೆಗಾವ್ಯಾಟ್‌, BTPSನ ಸಾಮರ್ಥ್ಯ 1,700 ಮೆಗಾವ್ಯಾಟ್‌. ಪ್ರಸ್ತುತ ಲಭ್ಯತೆಯಲ್ಲಿ RTPS ಸುಮಾರು 906 MW, BTPS ಸುಮಾರು 804 MW ಉತ್ಪಾದಿಸುತ್ತಿವೆ.

ಹಿಂದಿನ ವರ್ಷಗಳ ವಿದ್ಯುತ್‌ ಲಭ್ಯತೆ ಅಂಕಿಅಂಶಗಳನ್ನು ನೋಡಿದರೆ, FY24ರಲ್ಲಿ RTPS ಘಟಕಗಳಿಂದ ಒಟ್ಟು 10,382 ಮಿಲಿಯನ್ ಯೂನಿಟ್‌ ಹಾಗೂ BTPSನ ಮೂರು ಘಟಕಗಳಿಂದ ಒಟ್ಟು ಸುಮಾರು 10,824 ಮಿಲಿಯನ್ ಯೂನಿಟ್‌ ವಿದ್ಯುತ್‌ ಲಭ್ಯತೆ ಪರಿಗಣಿಸಲಾಗಿತ್ತು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜಲವಿದ್ಯುತ್‌ ಉತ್ಪಾದನೆಗೆ ನೀರಿನ ಕೊರತೆ, ಗಾಳಿ ವಿದ್ಯುತ್‌ ಉತ್ಪಾದನೆಯಲ್ಲಿ ಏರಿಳಿತ ಮತ್ತು ಹೆಚ್ಚುತ್ತಿರುವ ಗೃಹಬಳಕೆಯ ವಿದ್ಯುತ್‌ ಬೇಡಿಕೆ—ಈ ಮೂರು ಅಂಶಗಳು ವಿದ್ಯುತ್‌ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಿಸಿವೆ.

ಬೇಡಿಕೆ 18 ಸಾವಿರ MW ಸಮೀಪ!

ರಾಜ್ಯದ ವಿದ್ಯುತ್‌ ಬಳಕೆ ಕಳೆದ ಕೆಲ ವರ್ಷಗಳಲ್ಲಿ ತೀವ್ರವಾಗಿ ಏರಿಕೆಯಾಗಿದ್ದು, ಸುಮಾರು 10,000 MW ಮಟ್ಟದಿಂದ 18,000 MW ಸಮೀಪಕ್ಕೆ ಏರಿಕೆಯಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಇತ್ತೀಚೆಗೆ ತಿಳಿಸಿದ್ದಾರೆ. ಮಳೆ ಕೊರತೆಯಿಂದ ಜಲವಿದ್ಯುತ್‌ ಉತ್ಪಾದನೆ ಕುಸಿದಿರುವುದೇ ಪ್ರಮುಖ ಸವಾಲಾಗಿದೆ.

KPTCLನ ಸೆ.10ರ ಲೈವ್‌ ಮಾಹಿತಿಯಲ್ಲೂ ರಾಜ್ಯದ ಬೇಡಿಕೆ 18,000–19,000 MW ಮಟ್ಟದಲ್ಲಿ ದಾಖಲಾಗಿರುವುದು ವಿದ್ಯುತ್‌ ಬೇಡಿಕೆಯ ತೀವ್ರತೆಯನ್ನು ತೋರಿಸುತ್ತದೆ.

ಬಿಸಿಲು ಹೆಚ್ಚಿದಂತೆ ವಿದ್ಯುತ್‌ ಬಳಕೆಯೂ ಏರಿಕೆ

ಮಳೆ ಕೈಕೊಟ್ಟಿರುವುದರಿಂದ ವಾತಾವರಣದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿದೆ. ಇದರ ಪರಿಣಾಮವಾಗಿ ಮನೆಗಳು, ಕಚೇರಿಗಳು ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ AC, ಕೂಲರ್‌ ಮತ್ತು ಫ್ಯಾನ್‌ಗಳ ಬಳಕೆ ಹೆಚ್ಚಾಗಿದೆ. ವಿಶೇಷವಾಗಿ ಸಂಜೆ ವೇಳೆಯಲ್ಲಿ ಮನೆಗಳಿಗೆ ಜನರು ಮರಳುವ ಸಮಯದಲ್ಲಿ ವಿದ್ಯುತ್‌ ಬಳಕೆ ಏಕಾಏಕಿ ಏರಿಕೆಯಾಗುತ್ತಿದೆ.

ಅಂದರೆ, ವಿದ್ಯುತ್‌ ಉತ್ಪಾದನೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಬಳಕೆ ಮಾತ್ರ ಹೆಚ್ಚಾಗುತ್ತಿರುವುದು ರಾಜ್ಯದ ವಿದ್ಯುತ್‌ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ತಂದಿದೆ.

ಮಳೆಯೊಂದೇ ಪರಿಹಾರ?

ರಾಜ್ಯದ ಯಾವುದೇ ಭಾಗದಲ್ಲಿ ಉತ್ತಮ ಮಳೆಯಾದರೂ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಮಳೆಯಿಂದ ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗಿ ಜಲವಿದ್ಯುತ್‌ ಉತ್ಪಾದನೆ ಸುಧಾರಿಸಿದರೆ, ಪೀಕ್‌ ಅವರ್‌ನ ವಿದ್ಯುತ್‌ ಒತ್ತಡವೂ ಕಡಿಮೆಯಾಗಬಹುದು.

ಈ ನಡುವೆ ಕೊರತೆ ಎದುರಾದರೆ ಕೇಂದ್ರ ವಿದ್ಯುತ್‌ ಮೂಲಗಳು ಹಾಗೂ ಪವರ್‌ ಎಕ್ಸ್‌ಚೇಂಜ್‌ ಮೂಲಕ ಹೆಚ್ಚುವರಿ ವಿದ್ಯುತ್‌ ಖರೀದಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವರು ತಿಳಿಸಿದ್ದಾರೆ.

Key words: Karnataka, Faces, Power Supply, Pressure, load shedding

 

ENGLISH SUMMARY: 

Karnataka Faces Power Supply Pressure:

Bengaluru, Sept. 10: Karnataka is facing power supply pressure due to poor rainfall, intense heat and rising electricity consumption.

With temperatures rising, the use of ACs, coolers and fans has increased, pushing demand higher while power generation has declined, particularly from hydro sources. Thermal power generation at RTPS and BTPS is also under pressure. The situation may take 10–15 days to improve.

Power interruptions are likely during the peak-demand period of 6:30 PM to 9 PM across different parts of the state.

Production down… consumption up — Karnataka’s power grid faces a tough phase.