ಬೆಂಗಳೂರು ನಗರದ ಹೊರವಲಯ ಪ್ರದೇಶಗಳಲ್ಲಿ ನೀರಿನ ಅಭಾವ

 

ಬೆಂಗಳೂರು, ಸೆಪ್ಟೆಂಬರ್ ೨೭, ೨೦೨೧ : (www.justkannada.in news) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಬಹುಪಾಲು ಬೋರ್‌ವೆಲ್‌ಗಳು ಬೆಂಗಳೂರು ನಗರದ ಹೊರವಲಯಗಳಲ್ಲಿ, ಇಂದಿಗೂ ಸಹ ಬಿಬಿಎಂಪಿ ನೀರಿನ ಸಂಪರ್ಕ ಇಲ್ಲದಿರುವಂತಹ ಬಡಾವಣೆಗಳಲ್ಲಿವೆ.

ಬಿಬಿಎಂಪಿ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೋರ್‌ವೆಲ್‌ಗಳನ್ನು ಕೊರೆಯಲಾಗಿರುವ ಬೆಂಗಳೂರು ನಗರದ ಉತ್ತರ ಹಾಗೂ ಪಶ್ಚಿಮ ಭಾಗಗಳಲ್ಲಿ ನೀರಿನ ಅಭಾವ ಗಂಭೀರವಾಗಿದೆ. ದೊಡ್ಡಬಿದರಕಲ್ಲು, ಹೆರೊಹಳ್ಳಿ, ಉಲ್ಲಾಳು ಹಾಗೂ ಹೆಮ್ಮಿಗೆಪುರದಂತಹ ವಾರ್ಡ್ಗಳಲ್ಲಿ ಅಂತರ್ಜಲದ ಮೇಲಿನ ಅವಲಂಬಿಕೆ ಅತೀ ಹೆಚ್ಚಿನ ಪ್ರಮಾಣದಲ್ಲಿದೆ. ಅಧಿಕೃತ ದತ್ತಾಂಶದ ಪ್ರಕಾರ ಈ ಭಾಗಗಳಲ್ಲಿ ಬಿಬಿಎಂಪಿ ಸ್ವಾಮ್ಯದ ಬರೋಬ್ಬರಿ ೯,೨೯೪ ಬೋರ್‌ವೆಲ್‌ಗಳಿವೆ. ಈ ಪ್ರದೇಶಗಳಲ್ಲಿ ಕಾವೇರಿ ನೀರಿನ ಸರಬರಾಜು ಇಲ್ಲ.

ಈ ಒಟ್ಟು ಬೋರ್‌ವೆಲ್‌ಗಳ ಸಂಖ್ಯೆಯ ಪೈಕಿ ಸುಮಾರು ೧,೭೯೩ರಷ್ಟು ಬೋರ್‌ವೆಲ್‌ಗಳಲ್ಲಿ ನೀರಿಲ್ಲದಿರುವ ಕಾರಣದಿಂದಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬೋರ್‌ವೆಲ್‌ಗಳ ಮೂಲಕ ಸರಬರಾಜು ಮಾಡುತ್ತಿರುವಂತಹ ನೀರು ಬಹುಪಾಲು ಕಡಿಮೆ ಆದಾಯವಿರುವಂತಹ ಮನೆಗಳಿಗೆ ತಲುಪುತ್ತಿವೆ, ಬೇರೆ ಮನೆಗಳೂ ಸಹ ನೀರಿಗಾಗಿ ಅನಿವಾರ್ಯವಾಗಿ ಇತರೆ ವ್ಯವಸ್ಥೆಯನ್ನು (ಸ್ವಂತ ಬೋರ್‌ವೆಲ್) ಮಾಡಿಕೊಂಡಿವೆ. ಒಟ್ಟು ೪ ಲಕ್ಷ ನೋಂದಾಯಿತ ಬೋರ್‌ವೆಲ್‌ಗಳಿವೆ.

ವಾರ್ಡ್ವಾರು ಎಷ್ಟು ಬೋರ್‌ವೆಲ್‌ಗಳಿವೆ ಎಂದು ತಿಳಿದುಕೊಳ್ಳುವ ಮಾಧ್ಯಮದ ಪ್ರಯತ್ನಕ್ಕೆ ಲಭಿಸಿರುವ ಮಾಹಿತಿಯ ಪ್ರಕಾರ ಯಾವ ಸ್ಥಳಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅತೀ ಹೆಚ್ಚಿನ ಸಂಖ್ಯೆಯ ಬೋರ್‌ವೆಲ್‌ಗಳಿರುವ ವಾರ್ಡ್ಗಳೆಂದರೆ: ದೊಡ್ಡಬಿದರಕಲ್ಲು (೪೪೦), ಹೆರೊಹಳ್ಳಿ (೩೦೩), ಉಲ್ಲಾಳು (೨೮೩), ಹೊರಮಾವು (೨೪೧), ಹೆಮ್ಮಿಗೆಪುರ (೨೨೬), ತಣಿಸಂದ್ರ (೨೧೬) ಹಾಗೂ ಶೆಟ್ಟಿಹಳ್ಳಿ (೨೦೯). ಈ ಬಹುಪಾಲು ಬಡಾವಣೆಗಳಲ್ಲಿ ಬೋರ್‌ವೆಲ್‌ಗಳನ್ನು ಕೆರೆಗಳಿಗೆ ಹತ್ತಿರದಲ್ಲೇ ಕೊರೆಯಲಾಗಿದೆ.
ಅತೀ ಕಡಿಮೆ ಸಂಖ್ಯೆಯ ಸಾರ್ವಜನಿಕ ಬೋರ್‌ವೆಲ್‌ಗಳಿರುವ ವಾರ್ಡ್ಗಳೆಂದರೆ: ರಾಜಗೋಪಾಲನಗರ (೨), ಹೊಯ್ಸಳನಗರ (೩), ಗಂಗೇನಹಳ್ಳಿ (೩), ಶಿವಾಜಿನಗರ (೪), ಮಾರುತಿಸೇವಾನಗರ (೫), ಜೆ.ಪಿ.ನಗರ (೬) ಹಾಗೂ ಸಾರಕ್ಕಿ (೬). ಈ ಎಲ್ಲಾ ವಾರ್ಡ್ಗಳಿಗೂ ಬಿಡಬ್ಲುಎಸ್‌ಎಸ್‌ಬಿ ವತಿಯಿಂದ ಕಾವೇರಿ ನೀರು ಸರಬರಾಜಿನ ವ್ಯವಸ್ಥೆಯನ್ನು ಹೊಂದಿವೆ.

ಚಿತ್ರ ಕೃಪೆ : ಇಂಟರ್ ನೆಟ್

ಈ ಪೈಕಿ ಬಹುಪಾಲು ಬೋರ್‌ವೆಲ್‌ಗಳನ್ನು ಆಯಾ ವಾರ್ಡುಗಳ ಕೌನ್ಸಿಲರ್‌ಗಳಿಂದ ಅಳವಡಿಸಲಾಗಿವೆ. ಈ ಬಾರಿಯೂ ಸಹ ಬಿಬಿಎಂಇಪಿ ನಗರದ ಹಲವು ಭಾಗಗಳಲ್ಲಿ ಒಟ್ಟು ೧೦೪ ಬೋರ್‌ವೆಲ್‌ಗಳನ್ನು ಕೊರೆಯಲು ರೂ.೯೭.೬೫ ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಯೋಜನೆಗೆ ೧೫ನೇ ಹಣಕಾಸು ಆಯೋಗದ ಅಡಿಯಲ್ಲಿ ಹಣ ಒದಗಿಸಲಾಗಿದೆ. ೧೧೦ ಗ್ರಾಮಗಳಲ್ಲಿ ನೀರಿನ ಸರಬರಾಜು ಸಂಪರ್ಕಜಾಲದ ಅನುಷ್ಠಾನದಲ್ಲಿ ಆಗಿರುವ ವಿಳಂಬವು ಅಂತರ್ಜಲದ ಬೇಡಿಕೆಯ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ಮಾಜಿ ಕೌನ್ಸಿಲರ್‌ಗಳು.

ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸದಿರುವ ಬೋರ್‌ವೆಲ್‌ಗಳಿರುವ ವಾರ್ಡುಗಳ ಪೈಕಿ: ತಣಿಸಂದ್ರ (೭೫), ಮರಪ್ಪಪಾಳ್ಯ (೬೭), ಶೆಟ್ಟಿಹಳ್ಳಿ (೫೬), ಜಕ್ಕೂರ್ (೫೨) ಹಾಗೂ ಮಹಾಲಕ್ಷಿö್ಮಪುರಂ (೫೨) ಸೇರಿವೆ.

ಅಧಿಕಾರಿಗಳ ಪ್ರಕಾರ ಬಿಡಬ್ಲುಎಸ್‌ಎಸ್‌ಬಿ ೧೧೦ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಪೈಪುಗಳ ಅಳವಡಿಕೆಯ ಶೇ.೯೮ ಕಾಮಗಾರಿಗಳು ಪೂರ್ಣಗೊಂಡಿವೆ. ನದಿಯಿಂದ ನಗರಕ್ಕೆ ನೀರನ್ನು ಸರಬರಾಜು ಮಾಡುವ ಕಾವೇರಿ ನೀರು ಸರಬರಾಜು ಯೋಜನೆಯ ( ಸಿಡಬ್ಲುಎಸ್‌ಎಸ್‌) ೫ನೇ ಹಂತದ ಕಾಮಗಾರಿಗಳು ಈವರೆಗೆ ಕೇವಲ ಶೇ.೧೫ರಷ್ಟು ಪ್ರಗತಿಯನ್ನು ಸಾಧಿಸಿದೆ.

ಬಿಡಬ್ಲುಯಎಸ್‌ಎಸ್‌ಬಿ ನಗರದ ಮೂಖ್ಯವಾದ ಪ್ರದೇಶಗಳಿಗೆ ಸರಬರಾಜು ಮಾಡಿ ಉಳಿಯುವ ಹೆಚ್ಚಿನ ನೀರನ್ನು ಮಾತ್ರ ಹೊಸ ಬಡಾವಣೆಗಳಿಗೆ ಸರಬರಾಜು ಮಾಡಬಹುದಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹೊರವಲಯದಲ್ಲಿರುವ ಬಡಾವಣೆಗಳು ಕಾವೇರಿ ನೀರಿನ ಸರಬರಾಜಿಗಾಗಿ ಮತ್ತಷ್ಟು ಅವಧಿಯವರೆಗೆ ಕಾಯಬೇಕಾಗಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

key words: Bangalore-water-crisis-looms-over-city’s-periphery-bore-wells