ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯದಿದ್ರೆ ಜನ ನಿಮ್ಮನ್ನ ಕಸದ ತೊಟ್ಟಿಗೆ ಹಾಕ್ತಾರೆ- ಸರ್ಕಾರಕ್ಕೆ ಕೋಡಿಹಳ್ಳಿ ಚಂದ್ರ ಶೇಖರ್ ಎಚ್ಚರಿಕೆ.

ಬೆಂಗಳೂರು,ಸೆಪ್ಟಂಬರ್,27,2021(www.justkannada.in):  ನಿಮಗೆ ಅಧಿಕಾರದ ಆಸೆ ಇದ್ದರೆ ಕೃಷಿ ತಿದ್ಧುಪಡಿ ಕಾಯ್ದೆಯನ್ನ ಹಿಂಪಡೆಯಿರಿ. ಇಲ್ಲದಿದ್ರೆ ಜನರು ನಿಮ್ಮನ್ನ ಕಸದ ತೊಟ್ಟಿಗೆ ಎಸೆಯುತ್ತಾರೆ ಎಂದು  ಕೇಂದ್ರ ಸರ್ಕಾರಕ್ಕೆ  ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು ವಿವಿಧ ಸಂಘಟನೆಗಳು ಹಾಗೂ ಕಾಂಗ್ರೆಸ್ ರೈತರ ಹೋರಾಟಕ್ಕೆ ಬೆಂಬಲ ನೀಡಿವೆ. ಈ ಮಧ್ಯೆ ನಗರದ ಟೌನ್ ಹಾಲ್ ನಿಂದ ರೈತರ ಪ್ರತಿಭಟನಾ ರ್ಯಾಲಿ ಶುರವಾಗಿದ್ದು ಫ್ರೀಡಂಪಾರ್ಕ್ ಗೆ ತಲುಪಲಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರೈತಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್, ಸರ್ಕಾರ ಬಂದ್ ವಿಫಲಗೊಳಿಸಲು ಯತ್ನಿಸುತ್ತಿದೆ.  ಹೀಗಾಗಿ ಕೆಎಸ್ ಆರ್ ಟಿಸಿ, ಬಿಎಂಟಿಸಿಬಸ್ ಗಳನ್ನ ಓಡಿಸುತ್ತಿದ್ದಾರೆ. ದೇಶಾಧ್ಯಂತ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಧ್ವನಿ ಎತ್ತಿದ್ದಾರೆ . ಈ ಧ್ವನಿ ಪ್ರಧಾನಿ ಮೋದಿ ಕಿವಿಗೆ ಕೇಳಿಸಬೇಕು. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ಸಹಕಾರ ನೀಡಬೇಕು.  ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರತಿಭಟನೆಗೆ ಕೆಆರ್ ಪುರ ಸಂತೆ ವ್ಯಾಪಾರಗಳ ಒಕ್ಕೂಟ ಸಾಥ್ ಕೊಟ್ಟಿದ್ದು  ಕೆಆರ್ ಪುರ ಸಂತೆ ಮಾರುಕಟ್ಟೆ ಅಧ್ಯಕ್ಷ ಎಲೆ ಶ್ರೀನಿವಾಸ್ ನೇತೃತ್ವದಲ್ಲಿ ಗೋಣಿ ಚೀಲ ತೊಟ್ಟು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ರ್ಯಾಲಿ ನಿಲ್ಲಿಸಲು ಪೊಲೀಸರು ಮುಂದಾದರು. ಕೆ.ಆರ್.ಪುರ ಮಾರ್ಕೆಟ್ ನಿಂದ 100 ಮೀ. ಸಾಗಿದ ರ್ಯಾಲಿ ಕೆ.ಆರ್.ಪುರ ಬಿಬಿಎಂಪಿ ಕಚೇರಿ ಮುಂದೆ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಭಟನೆಗೆ ಮುಂದಾದರು.

Key words:  Agricultural- Amendment- Act – back –farmer leader-Kodihalli ChandraShekhar

ENGLISH SUMMARY…

“People will ditch you if you won’t withdraw the amended agri bill: Farmer leader Kodihalli Chandrashekar warns govt.
Bengaluru, Sept. 27, 2021 (www.justkannada.in): “If you want power, withdraw the amended agriculture bill, otherwise people will ditch you,” farmer leader Kodihalli Chandrashekar warned the Govt. of India.
A call for Bharath Bundh has been given opposing the amended agriculture bill of the Govt. of India, which is supported by several farmers’ organizations and the Congress party. The protest march in Bengaluru commenced from the Town Hall and will conclude at Freedom Park.
Speaking on the occasion, farmer leader Kodihalli Chandrashekar said that the government is attempting to make the bundh a failure. “That is why it is running KSRTC and BMTC buses. Farmers across the country are opposing the amended agriculture bill. This voice should reach Modi. We are protesting peacefully, and the government should cooperate, it should withdraw the amended bill,” he demanded.
The K.R. Puram Traders Federation has extended its support to the protest. The protestors demonstrated under the leadership of K.R. Puram Regulated Market President Yele Srinivas, wearing gunny bags.
Keywords: Farmers rally/ Bharath Bundh/ Kodihalli Chandrashekar/ ditch