Tuesday, September 29, 2026

BDA Apartments

ತವರಿಗೆ ಬಂದ ಸಿಂಧುಗೆ ಭರ್ಜರಿ ಸ್ವಾಗತ BDA JK_Adv BDA Adv
Home Front Page ತವರಿಗೆ ಬಂದ ಸಿಂಧುಗೆ ಭರ್ಜರಿ ಸ್ವಾಗತ

ತವರಿಗೆ ಬಂದ ಸಿಂಧುಗೆ ಭರ್ಜರಿ ಸ್ವಾಗತ

ನವದೆಹಲಿ, ಆಗಸ್ಟ್ 27, 2019 (www.justkannada.in): ಡಬ್ಲ್ಯೂಎಫ್ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ಪಿ ವಿ ಸಿಂಧೂ ಇಂದು ಮುಂಜಾನೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅವರಿಗೆ ಅಭೂತಪೂರ್ವ ಸ್ವಾಗತ ದೊರೆತಿದೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಧೂ, ತನ್ನ ಐತಿಹಾಸಿಕ ಸಾಧನೆಗಾಗಿ ತನ್ನ ತರಬೇತುದಾರರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಜೊತೆಗೆ ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದ ತಿಳಿಸಿದರು.

‘ಇದು ನನ್ನ ಪಾಲಿನ ದೊಡ್ಡ ಕ್ಷಣ. ಮುಂದೆ ಮತ್ತಷ್ಟು ಪ್ರಶಸ್ತಿ ಗೆಲ್ಲಲು ಹೆಚ್ಚು ಶ್ರಮಿಸುತ್ತೇ. ಇದು ನನ್ನ ಬಹುನಿರೀಕ್ಷಿತ ಗೆಲುವು, ಹಿಂದೆ ಎರಡು ಬಾರಿ ಈ ಗೆಲುವಿನಿಂದ ವಂಚಿತಳಾಗಿದ್ದೆ.ಆದರೆ ಅಂತಿಮವಾಗಿ ನಾನು ಗುರಿ ಮುಟ್ಟಿದ್ದೇನೆ.’ ಎಂದು ಸಂತಸ ವ್ಯಕ್ತಪಡಿಸಿದರು.