ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉತ್ತಮ ಅಂಶಗಳಿದ್ದರೂ, ಸಮರ್ಪಕ ಅನುಷ್ಠಾನ ಕಷ್ಟ : ಪ್ರೊ.ಆರ್.ಇಂದಿರಾ 

ಮೈಸೂರು,ಸೆಪ್ಟೆಂಬರ್,13,2020(www.justkannada.in) : ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉತ್ತಮ ಆದರ್ಶಗಳು ಇದ್ದಂತೆ ಕಾಣುತ್ತಿದೆ. ಆದರೆ, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಕಷ್ಟ ಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ ಅಭಿಪ್ರಾಯಪಟ್ಟರು.

jk-logo-justkannada-logo

ಗಾಂಧಿ ವಿಚಾರ ಪರಿಷದ್ ವತಿಯಿಂದ ಮೈಸೂರು ವಿವಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರ ಸಂಕಿರಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-ಶಿಕ್ಷಣ ಮಾದ್ಯಮ ಕುರಿತು ವಿಷಯ ಮಂಡನೆ ಮಾಡಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತ ಸಂವಿಧಾನದಲ್ಲಿರುವ ಮೂಲ ಆಶಯಗಳನ್ನು ಒಳಗೊಂಡಿದ್ದು, ಕೆಲವೇ ಕೆಲವು ಅಂಶಗಳು ಹೊಸದಾಗಿ ಸೇರಿಸಲಾಗಿದೆ. ಆದರೆ, ಇಂದಿನ ಶಿಕ್ಷಣದ ಮೂಲಕ ಸಮತೆ ಸೃಷ್ಟಿಸುವುದು ಸವಾಲಿನ ಕೆಲಸವಾಗಿದೆ ಎಂದರು.

Although-there-good-points-National-Education-Policy-Sufficient-implementation-difficult-Prof.R.Indira

ಶಿಕ್ಷಣ ಎನ್ನುವುದು ಖಾಸಗಿ ವಲಯಕ್ಕೆ ಒಂದು ನಿಂತಿದೆ. ರಾಜ್ಯದಲ್ಲಿ 48216 ಸರಕಾರಿ ಶಾಲೆಗಳಿದ್ದು, 7261 ಅನುದಾನಿತ ಶಾಲೆಗಳಿವೆ. 9769 ಖಾಸಗಿ ಶಾಲೆಗಳಿವೆ. ಇಷ್ಟಿದ್ದರೂ, ಮಕ್ಕಳ ಕೊರತೆ ನೆಪವೊಡ್ಡಿ ಸರಕಾರಿ ಶಾಲೆಗಳನ್ನು ಒಂದೊಂದಾಗಿ ಮುಚ್ಚಲಾಗುತ್ತಿದೆ. ಈ ರೀತಿಯಾದರೆ ಎಲ್ಲರನ್ನು ಶಿಕ್ಷಣ ಒಳಗೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.

ಇಂದು ಬಹಳಷ್ಟು ಪಿಎಚ್ ಡಿ ಗ್ರಂಥಗಳು ಕನ್ನಡದಲ್ಲಿಯೇ ಇವೆ. ಹೊಸ ಶಿಕ್ಷಣ ಪದ್ಧತಿಯಲ್ಲಿ ಸ್ಥಳೀಯ ಭಾಷಾ ಮಾದ್ಯಮವನ್ನು ಹೊರಗಿಸುವ ಪ್ರಯತ್ನವಾಗುತ್ತದೆ. ಇದರಿಂದ ಭಾಷೆಯ ಸಂಬಂಧ ಆಗಬೇಕಾದ ಕೆಲಸಗಳು ನಿಲ್ಲುವ ಅಪಾಯವಿದೆ ಎಂದು ಹೇಳಿದರು.

ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುವುದು 

ಪ್ರಾಧ್ಯಾಪಕ ಪ್ರೊ.ಮುಜಾಫರ್ ಅಸಾದಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ-ರಾಜಕಾರಣ ವಿಷಯ ಕುರಿತು ಮಾತನಾಡಿ, ಹೊಸ ಶಿಕ್ಷಣ ನೀತಿಯನ್ನು ನಾವು ವಿರೋಧಬಾಸದಿಂದ ನೋಡಬೇಕು. ಇದರಲ್ಲಿ ಅನೇಕ ವಿಸ್ಮತಿಗಳಿವೆ. ನೆಹರು ಮತ್ತು ಗಾಂಧಿಯ ಶಿಕ್ಷಣ ನೀತಿಯ ಮಾದರಿಗಳನ್ನು ಹೊಸ ಶಿಕ್ಷಣ ಪದ್ಧತಿಯಲ್ಲಿ ಕೈಬಿಡಲಾಗಿದೆ. ಇದರ ಉದ್ದೇಶ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುವುದು ಹಾಗೂ ಹಿಂದಿ ಭಾಷೆ ಹೇರುವುದಾಗಿದೆ ಎಂದು ಬೇಸರವ್ಯಕ್ತಪಡಿಸಿದರು.

ಉದಾರೀಕರಣ ಹೆಸರಿನಲ್ಲಿ ಶಿಕ್ಷಣ ನೀತಿಯನ್ನು ಒಡೆಯುವುದು 

ರಾಷ್ಟ್ರೀಯ ಶಿಕ್ಷಣ ನೀತಿ-ಖಾಸಗೀಕರಣ ಕುರಿತು ಮಾತನಾಡಿದ ಚಿಂತಕ ಶಿವಸುಂದರ್, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿ ಅಂಬಾನಿ, ಅದಾನಿ ಅವರ ಖೈವಾಡವಿದೆ. ಉದಾರೀಕರಣ ಹೆಸರಿನಲ್ಲಿ ಶಿಕ್ಷಣ ನೀತಿಯನ್ನು ಒಡೆಯಲಾಗುತ್ತಿದೆ. ಅಂಬಾನಿ ಒಡೆತನದ 5ಜಿ ನೆಟ್ವರ್ಕ್ ಗಾಗಿ ದೇಶಾದ್ಯಂತ ಆನ್ ಲೈನ್ ಶಿಕ್ಷಣ ಜಾರಿ ಮಾಡಲಾಗಿದೆ. ಜೊತೆಗೆ ಇದಕ್ಕೆ ಅನುಕೂಲವಾಗುವಂತೆ ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ ಎಂದರು.

ವಿಚಾರ ಸಂಕಿರಣವನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಪತ್ರಕರ್ತ ಜಿ.ಪಿ.ಬಸವರಾಜು, ಕೃಷ್ಣಪ್ರಸಾದ್, ಚಿಂತಕ ಪ್ರೊ.ಪಂಡಿತಾರಾಧ್ಯ ಇತರರು ಇದ್ದರು.

key words : Although-there-good-points-National-Education-Policy-
Sufficient-implementation-difficult-Prof.R.Indira