Saturday, October 17, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ಮಹಿಳೆಯರ ಟ್ವೆಂಟಿ- 20 ವಿಶ್ವಕಪ್: ಭಾರತ-ಆಸ್ಟ್ರೇಲಿಯಾ ಕದನಕ್ಕೆ ವೇದಿಕೆ ಸಜ್ಜು

ಮಹಿಳೆಯರ ಟ್ವೆಂಟಿ- 20 ವಿಶ್ವಕಪ್: ಭಾರತ-ಆಸ್ಟ್ರೇಲಿಯಾ ಕದನಕ್ಕೆ ವೇದಿಕೆ ಸಜ್ಜು

ಸಿಡ್ನಿ, ಮಾರ್ಚ್ 06, 2020 (www.justkannada.in): ಭಾರತ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ಮಹಿಳೆಯರ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಮೊದಲ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಹೋರಾಟಕ್ಕೆ ಮಳೆ ಅಡ್ಡಿಯಾಯಿತು. ಒಂದೂ ಎಸೆತ ಕಾಣದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಲೀಗ್‌ ಹಂತದಲ್ಲಿ ಒಂದೂ ಸೋಲಿಲ್ಲದೇ ಅಗ್ರಸ್ಥಾನ ಗಳಿಸಿದ್ದ ಭಾರತ ತಂಡವು ಇದೇ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿತು.

ಹೋದ ವರ್ಷದ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ ನಲ್ಲಿ ಭಾರತ ತಂಡ ಸೋತಿತ್ತು. ಆದರೆ, ಈ ಸಲ ಬಿ ಗುಂಪಿನಲ್ಲಿ ಪಡೆದ ಎರಡನೇ ಸ್ಥಾನದೊಂದಿಗೆ ನಾಲ್ಕರ ಘಟ್ಟ ಪ್ರವೇಶಿಸಿದ್ದ ಇಂಗ್ಲೆಂಡ್‌ ನಿರಾಶೆ ಅನುಭವಿಸಿತು.