ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ನಂ.1 ಸ್ಥಾನಕ್ಕೆ ಕುತ್ತಿಲ್ಲ!

ದುಬೈ, ಮಾರ್ಚ್ 06, 2020 (www.justkannada.in): ಭಾರತ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಪಟ್ಟವನ್ನು ಉಳಿಸಿಕೊಂಡಿದೆ.

ನ್ಯೂಜಿಲೆಂಡ್‌ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಮುಖಭಂಗ ಅನುಭವಿಸಿದರೂ, ನಂ.1 ಪಟ್ಟಕ್ಕೆ ಕುತ್ತು ಬಂದಿಲ್ಲ. ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದರೂ, ಬ್ಯಾಟ್ಸಮನ್ನರ ಪಟ್ಟಿಯಲ್ಲಿ ನಾಯಕ ವಿರಾಟ್‌ ಕೊಹ್ಲಿ ಅವರು ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಭಾರತ 116 ರೇಟಿಂಗ್‌ ಪಾಯಿಂಟ್ಸ್‌ ಸಂಗ್ರಹಿಸಿದೆ. ಇದು ಎರಡನೇ ಸ್ಥಾನದ ಲ್ಲಿರುವ ನ್ಯೂಜಿಲೆಂಡ್‌ಗಿಂತ ಆರು ಪಾಯಿಂಟ್‌ ಹೆಚ್ಚು. ಆಸ್ಟ್ರೇಲಿಯಾ 108 ಪಾಯಿಂಟ್‌ಗಳೊಡನೆ ಮೂರನೇ ಸ್ಥಾನದಲ್ಲಿದೆ.

ಕೊಹ್ಲಿ, ನ್ಯೂಜಿಲೆಂಡ್‌ ವಿರುದ್ಧ ಸರಣಿಯ ನಾಲ್ಕು ಇನಿಂಗ್ಸ್‌ಗಳಲ್ಲಿ 38 ರನ್‌ಗನ್ನಷ್ಟೇ ಗಳಿಸಿದ್ದರು. ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌, ಕೊಹ್ಲಿ ಅವರಿಗಿಂತ 25 ಪಾಯಿಂಟ್ಸ್‌ ಹೆಚ್ಚು ಹೊಂದಿದ್ದಾರೆ.