Sunday, September 20, 2026

BDA Apartments

ಬಾಲಿವುಡ್ ನಟ ಫರಾಜ್ ಖಾನ್ ನಿಧನ BDA JK_Adv BDA Adv
Home Cinema ಬಾಲಿವುಡ್ ನಟ ಫರಾಜ್ ಖಾನ್ ನಿಧನ 

ಬಾಲಿವುಡ್ ನಟ ಫರಾಜ್ ಖಾನ್ ನಿಧನ 

ಬೆಂಗಳೂರು,ನವೆಂಬರ್, 04,2020(www.justkannada.in)  : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ‘ಮೆಹಂದಿ’, ‘ಫರೆಬ್‌’ ಮುಂತಾದ ಹಿಂದಿ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದ ಫರಾಜ್ ಖಾನ್ ಬುಧವಾರ (ನ.4) ಕೊನೆಯುಸಿರೆಳೆದರು.jk-logo-justkannada-logoಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಫರಾಜ್‌ ಖಾನ್‌ ನಮ್ಮೆಲ್ಲರನ್ನು ಬಿಟ್ಟುಹೋದರು ಎಂಬುದನ್ನು ತಿಳಿಸಲು ತುಂಬ ನೋವಾಗುತ್ತಿದೆ. ಅವರಿಗೆ ಅಗತ್ಯ ಇದ್ದಾಗ ಸಹಾಯ ಮಾಡಿದ ಮತ್ತು ಶುಭ ಹಾರೈಸಿದ್ದ ಎಲ್ಲರಿಗೂ ಧನ್ಯವಾದಗಳು. ಅವರ ಕುಟುಂಬದವರಿಗಾಗಿ ಪ್ರಾರ್ಥಿಸಿ. ಅವರ ಅಗಲಿಕೆಯಿಂದ ಆದ ನಷ್ಟವನ್ನು ತುಂಬಲು ಸಾಧ್ಯವಿಲ್ಲ’ ಎಂದು ಬಾಲಿವುಡ್ ನಿರ್ದೇಶಕಿ/ನಿರ್ಮಾಪಕಿ ಪೂಜಾ ಭಟ್‌ ಟ್ವೀಟ್‌ ಮಾಡಿದ್ದಾರೆ.

ಶ್ವಾಸಕೋಶದ ಇನ್‌ಫೆಕ್ಷನ್‌ನಿಂದ ಬಳಲುತ್ತಿರುವ ಫರಾಜ್‌ ಖಾನ್‌ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಕೆಮ್ಮಿನಿಂದ ಬಳಲುತ್ತಿರುವ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಕುಟುಂಬದವರ ಬಳಿ ಇದ್ದ ಹಣವೆಲ್ಲ ಖಾಲಿ ಆಗಿ, ಚಿಕಿತ್ಸೆಗಾಗಿ ಇನ್ನೂ 25 ಲಕ್ಷ ರೂ. ಬೇಕಾಗಿದೆ ಎಂದು ಫರಾಜ್‌ ಕುಟುಂಬದವರು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸಲ್ಮಾನ್‌ ಖಾನ್‌, ಫೂಜಾ ಭಟ್‌ ಮುಂತಾದ ಸೆಲೆಬ್ರಿಟಿಗಳು ಸ್ಪಂದಿಸಿದ್ದರು. ಕಡೆಗೂ ಫರಾಜ್‌ ಬದುಕುಳಿಯಲಿಲ್ಲ.

Bollywood-actor-Faraj-Khan-dies

key words : Bollywood-actor-Faraj-Khan-dies