Thursday, August 6, 2026

BDA Apartments

Home Front Page ಕಾಡಂಚಿನ ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ : ಸುರಕ್ಷಿತವಾಗಿ ನಾಗರಹೊಳೆ ಅರಣ್ಯಕ್ಕೆ ಬಿಡುಗಡೆ 

ಕಾಡಂಚಿನ ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ : ಸುರಕ್ಷಿತವಾಗಿ ನಾಗರಹೊಳೆ ಅರಣ್ಯಕ್ಕೆ ಬಿಡುಗಡೆ 

ಮೈಸೂರು,ನವೆಂಬರ್,04,2020(www.justkannada.in) :  ಇತ್ತೀಚೆಗೆ ಜಾನುವಾರಗಳ ಮೇಲೆ ದಾಳಿ ನಡೆಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿರುವ ಘಟನೆ ಹುಣಸೂರು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ನಡೆದಿದೆ.jk-logo-justkannada-logo

ತೆಂಕಲಕೊಪ್ಪಲು ಹಾಗೂ ಮೈದನಹಳ್ಳಿ ಸುತ್ತಮುತ್ತ ಚಿರತೆಯೊಂದು ಕುರಿ, ನಾಯಿಗಳ ಮೇಲೆ ದಾಳಿ ನಡೆಸಿ ಗ್ರಾಮದ ಜನರಲ್ಲಿ ಭಯ ಮೂಡಿಸಿ ಸಾಕಷ್ಟು ಉಪಟಳವನ್ನು ನೀಡಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಚಿರತೆ ಸೆರೆಗಾಗಿ ಜಮೀನೊಂದರಲ್ಲಿ ಬೋನನ್ನು ಇರಿಸಿದ್ದರು.

ಸದ್ಯ ಚಿರತೆ ಬೋನಿ​ಗೆ  ಬಿದ್ದಿದ್ದು, ಈ ಚಿರತೆಯನ್ನು ಸುರಕ್ಷಿತವಾಗಿ ನಾಗರಹೊಳೆ ಅರಣ್ಯಕ್ಕೆ ಬಿಡಲಾಗಿದೆ‌ ಎಂದು ಅಧಿಕಾರಿಗಳು ತಿಳಿಸಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.Bonnie,fallen,leopard,village,forest edge,Safely,released,Nagarahole,Forest

key words : Bonnie-fallen-leopard-village-forest edge-Safely-released-Nagarahole-Forest