ದೇಹದಲ್ಲಿ ಎರಡು ಅಂಡವಾಯು ಹೊಂದಿದ್ದ ಮಹಿಳೆಗೆ ದೇಶದಲ್ಲೇ ಮೊದಲ ಬಾರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ..

ಬೆಂಗಳೂರು,ಜುಲೈ,31,2023(www.justkannada.in):  76 ವರ್ಷದ ಮಹಿಳೆಯ ಮೂತ್ರಕೋಶ, ಯೋನಿ ಹಾಗೂ ಗುದದ್ವಾರದಲ್ಲಿ ಬೆಳೆದು ಕೊಂಡಿದಿದ್ದ ಎರಡು ರೀತಿಯ ಪ್ಯಾರಾಸ್ಟೊಮಲ್ ಮತ್ತು ಪೆರಿನಿಯಲ್ ಹರ್ನಿಯಾವನ್ನು ಲ್ಯಾಪರೋಸ್ಕೋಪಿಕ್‌ ಮೂಲಕ ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರು ನಡೆಸಿದ್ದು, ಎರಡು ಹರ್ನಿಯಾಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು ದೇಶದಲ್ಲೇ ಮೊದಲು.

ಈ ಕುರಿತು ಮಾತನಾಡಿದ ಮಿನಿಮಲ್ ಆಕ್ಸೆಸ್ ಮತ್ತು ಬಾರಿಯಾಟ್ರಿಕ್ ಸರ್ಜರಿ ಹೆಚ್ಚುವರಿ ನಿರ್ದೇಶಕ ಡಾ. ಗಣೇಶ್‌ ಶೆಣೈ, 76 ವರ್ಷದ ಮಹಿಳೆಯಲ್ಲಿ ಆರು ವರ್ಷಗಳ ಹಿಂದೆಯೇ ಪ್ಯಾರಾಸ್ಟೊಮಲ್ ಮತ್ತು ಪೆರಿನಿಯಲ್ ಹರ್ನಿಯಾ (ಅಂಡವಾಯು)ವು ಬೆಳೆಯುತ್ತಾ ಯೋನಿ, ಗರ್ಭಾಶಯ, ಮೂತ್ರಕೋಶ ಮತ್ತು ದುಗ್ಧರಸ ಗ್ರಂಥಿಯು ಪೂರ್ತಿಯಾಗಿ ಮುಚ್ಚಿಕೊಂಡಿದ್ದವು. ಇದರಿಂದ ಮಹಿಳೆ ಎಲ್ಲರಂತೆ, ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆರು ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಸಂಪೂರ್ಣವಾಗಿ ಯೋನಿ, ಗರ್ಭಾಶಯ, ಮೂತ್ರಕೋಶ ಹಾಗೂ ದುಗ್ಧರಸವನ್ನು ಸಂಪೂರ್ಣವಾಗಿ ತೆಗೆದುಹಾಕಿ, ಸಣ್ಣ ರಂಧ್ರ ಮಾಡಲಾಗಿತ್ತು, ಅದರಿಂದಲೇ ಮಲ, ಮೂತ್ರ ಮಾಡಲು ಸಾಧ್ಯವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆಕೆಯ ಹೊಟ್ಟೆಯ ಸುತ್ತಲೂ ನೋವು ಕಾಣಿಸಿಕೊಂಡು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಈ ವೇಳೆ ಆಕೆಯನ್ನು ಪರೀಕ್ಷಿಸಿದ ಬಳಿಕ ರೋಗಿಯು ಪ್ಯಾರಾಸ್ಟೊಮಲ್ ಮತ್ತು ಪೆರಿನಿಯಲ್ ಅಂಡವಾಯುಗಳಿಂದ ಬಳಲುತ್ತಿರುವುದು ತಿಳಿದುಬಂತು. ಹೀಗಾಗಿ ಆಕೆಗೆ ಲ್ಯಾಪರೋಸ್ಕೋಪಿಕ್‌ ಮೂಲಕ ಈ ಎರಡು ಅಂಡವಾಯುಗಳನ್ನು ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿ ಅಂಡವಾಯುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ರೋಗಿಯು ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಅಂಡವಾಯು ಮತ್ತೆ ಬೆಳೆಯದಂತ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವಿವರಿಸಿದರು.

ಫೋರ್ಟಿಸ್‌ ಆಸ್ಪತ್ರೆಯ ಬಿಸಿನೆಸ್ ಹೆಡ್ ಅಕ್ಷಯ್ ಒಲೆಟಿ ಮಾತನಾಡಿ, ಅಂಡವಾಯು ಬೆಳವಣಿಗೆಯಿಂದ ಮಹಿಳೆಯ ಪ್ರಾಣವೇ ಆಪತ್ತಿನಲ್ಲಿತ್ತು, ನಮ್ಮಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಲ್ಯಾಪರೋಸ್ಕೋಪಿಕ್‌ ಮೂಲಕ ಈ ಅಂಡವಾಯುವನ್ನು ತೆಗೆದು ಹಾಕಲಾಗಿದೆ. ಸಾಮಾನ್ಯವಾಗಿ ಒಂದು ಅಂಡವಾಯು ಬೆಳೆಯುತ್ತದೆ. ಆದರೆ ಈ ಮಹಿಳೆಯರಲ್ಲಿ ಎರಡು ಅಂಡವಾಯು ಬೆಳೆದು ದೊಡ್ಡ ಮಟ್ಟ ಸಮಸ್ಯೆ ಉಂಟು ಮಾಡಿತ್ತು, ಒಮ್ಮೆಲೆ ಎರಡು ಅಂಡವಾಯುವನ್ನು ತೆರೆವುಗೊಳಿಸಿದ ಮೊದಲ ಪ್ರಕರಣ ಇದಾಗಿದೆ ಎಂದು ಹೇಳಿದರು.

Key words:  woman -her body – successfully- operation- first time – country.