ವಿಶೇಷ ವಿದ್ಯಾರ್ಥಿಗಳಿಗೆ ಫುಲ್ ಫಿದಾ : ಸೆಲ್ಫಿಗೆ ಮೊರೆ ಹೋದ ‘ಗಡಿನಾಡು’ ನಾಯಕಿ ಸಂಚಿತಾ ಪಡುಕೋಣೆ

 

ಮೈಸೂರು, ಜ.18, 2020 : (www.justkannada.in news) : ಅಪರೂಪದ ಘಟನೆಗೆ ಮೈಸೂರು ಪತ್ರಕರ್ತರ ಭವನ ಶನಿವಾರ ಸಾಕ್ಷಿಯಾಯಿತು. ಇಂದು ಬೆಳಗ್ಗೆ ಆಯೋಜಿಸಿದ್ದ ಸಿನಿಮಾ ಪತ್ರಿಕಾಗೋಷ್ಠಿ ಬಳಿಕ ಈ ಘಟನೆ ನಡೆಯಿತು.

ನಗರದ ಪ್ರೆಸ್ ಕ್ಲಬ್ ನಲ್ಲಿ ‘ಗಡಿನಾಡು’ ಸಿನಮಾದ ಪ್ರೆಸ್ ಮೀಟ್ ಆಯೋಜಿಸಲಾಗಿತ್ತು. ಚಿತ್ರದ ನಾಯಕ, ನಾಯಕಿ ಸೇರಿದಂತೆ ಚಿತ್ರತಂಡ ಭಾಗವಹಿಸಿತ್ತು. ಪತ್ರಿಕಾಗೋಷ್ಠಿ ಬಳಿಕ ಚಿತ್ರದ ನಾಯಕಿ ಸಂಚಿತಾ ಪಡುಕೊಣೆ, ಪತ್ರಕರ್ತರ ಸಾಲಿನಲ್ಲಿದ್ದ ಯುವಕ, ಯುವತಿಯರ ಬಳಿ ತೆರಳಿ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.

mysore-kannada-film-gadinadu- JSS Polytechnic for the Differently Abled-students-journalist

ಅರೆ, ಇದ್ರಲ್ಲಿ ಏನು ವಿಶೇಷ ಅಂಥೀರಾ, ಈ ಪತ್ರಕರ್ತರು ‘ವಿಶೇಷ ವಿದ್ಯಾರ್ಥಿಗಳು’. ಮೈಸೂರಿನ ಜೆಸಿ ಕ್ಯಾಂಪ್ ಆವರಣದಲ್ಲಿರುವ ಜೆಎಸ್ಎಸ್ ಪಿಡಿಎ ಪಾಲಿಟೆಕ್ನಿಕ್ (JSS Polytechnic for the Differently Abled) ವಿದ್ಯಾರ್ಥಿಗಳು. ಕಂಪ್ಯೂಟರ್ ಅಪ್ಲಿಕೇಷನ್ಸ್ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ನ ಅಂತಿಮ ಹಂತದಲ್ಲಿ ಪ್ರಾಯೋಗಿಕ ಅನುಭವಕ್ಕಾಗಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಗೋಷ್ಠಿಯುದ್ದಕ್ಕೂ ವಿಶೇಷ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಚಿತ್ರತಂಡ ಫುಲ್ ಫಿದಾ.

ಬಳಿಕ ಈ ಬಗ್ಗೆ ಮಾತನಾಡಿದ ‘ ಗಡಿನಾಡು’ ಚಿತ್ರದ ನಾಯಕಿ, ರೆಗ್ಯೂಲರ್ ಸಿನಿಮಾ ಪತ್ರಕರ್ತರಂತೆ ಈ ವಿದ್ಯಾರ್ಥಿಗಳು ಸಿನಿಮಾ ಕ್ಷೇತ್ರದ ಬಗೆಗೆ ಮಾಹಿತಿ ಸಂಗ್ರಹಿಸಿ ಪ್ರಶ್ನೆ ಕೇಳಿದ್ದು ನಿಜಕ್ಕೂ ಸಂತಸದ ಸಂಗತಿ ಎಂದು ಹೆಮ್ಮೆಪಟ್ಟರು.

ಇತ್ತೀಚೆಗೆ ಬಿಡುಗಡೆಗೊಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ರಕ್ಷಿತ್ ಶೆಟ್ಟಿ ಅಭಿನಯದ ‘ ಶ್ರೀಮನ್ನಾರಾಯಣ ‘ ಸಿನಿಮಾ ಪ್ರದರ್ಶನಕ್ಕೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅಡ್ಡಿ ಪಡಿಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ವಿಶೇಷ ವಿದ್ಯಾರ್ಥಿಗಳು ಪ್ರಶ್ನಿಸಿದ್ದು ಅವರು ಸಿನಿಮಾ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಅಪ್ ಡೇಟ್ ಆಗಿರುವುದಕ್ಕೆ ನಿದರ್ಶನವಾಗಿತ್ತು.

mysore-kannada-film-gadinadu- JSS Polytechnic for the Differently Abled-students-journalist

ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ವಿದ್ಯಾರ್ಥಿ ರಾಕೇಶ್ , ಅಂತಿಮ ಸೆಮಿಸ್ಟರ್ ನಲ್ಲಿ ಪ್ರಾಯೋಗಿಕವಾಗಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಬೇಕು. ಆದ್ದರಿಂದ ಕಳೆದ ಕೆಲ ದಿನಗಳಿಂದ ಮೈಸೂರು ಪತ್ರಕರ್ತರ ಭವನದಲ್ಲಿ ನಡೆಯುವ ಪತ್ರಿಕಾಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದೇವೆ. ನಿಜಕ್ಕೂ ಇದ್ದೊಂದು ಅಪರೂಪದ ಅನುಭವ. ಇದನ್ನೆಂದು ಮರೆಯಲಾಗದು ಎಂದು ಸಂತಸ ವ್ಯಕ್ತಪಡಿಸಿದರು.

key words : mysore-kannada-film-gadinadu- JSS Polytechnic for the Differently Abled-students-journalist