Friday, September 18, 2026

BDA Apartments

Home Front Page ದಾನಶೂರ ಕರ್ಣರಂತೆ ತಮಿಳುನಾಡಿಗೆ ನೀರು ಕೊಟ್ರು: ಕಾಂಗ್ರೆಸ್ ಮಾಡಿದ ತಪ್ಪಿನಿಂದ ನೀರಿನ ಸಮಸ್ಯೆ- ಆರ್.ಅಶೋಕ್ ಟೀಕೆ.

ದಾನಶೂರ ಕರ್ಣರಂತೆ ತಮಿಳುನಾಡಿಗೆ ನೀರು ಕೊಟ್ರು: ಕಾಂಗ್ರೆಸ್ ಮಾಡಿದ ತಪ್ಪಿನಿಂದ ನೀರಿನ ಸಮಸ್ಯೆ- ಆರ್.ಅಶೋಕ್ ಟೀಕೆ.

ಬೆಂಗಳೂರು, ಮಾರ್ಚ್,9,2024(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉದ್ಭವವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ವಿಪಕ್ಷ ನಾಯಕ ಆರ್.ಅಶೋಕ್  ವಾಗ್ದಾಳಿ ನಡೆಸಿದ್ದಾರೆ.

ಕಾವೇರಿ ನದಿಯಲ್ಲಿ ನೀರು ಇತ್ತು. ಆದರೆ ಕಾಂಗ್ರೆಸ್ ಸರ್ಕಾರ ದಾನಶೂರ ಕರ್ಣರಂತೆ ತಮಿಳುನಾಡಿಗೆ ನೀರು ಕೊಟ್ರು. ಕಾಂಗ್ರೆಸ್ ಮಾಡಿದ ತಪ್ಪಿನಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಎಂದು ಆರ್.ಅಶೋಕ್  ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,  ಈ ಹಾಳಾದ ಕಾಂಗ್ರೆಸ್ ಕಾಲಿಟ್ಟಾಗಲೆಲ್ಲಾ ಬರ ಬಂದಿದೆ. ಹಿಂದೆ ಸಿದ್ದರಾಮಯ್ಯ ಇದ್ದಾಗಲೂ ನಾಲ್ಕು ವರ್ಷ ಬರ ಬಂದಿತ್ತು.  ಕಾವೇರಿಯಲ್ಲಿ ನೀರು ಇತ್ತು. ತಮಿಳುನಾಡಿಗೆ ನೀರುಕೊಟ್ರು. ಕಾಂಗ್ರೆಸ್ ಮಾಡಿದ ತಪ್ಪಿನಿಂದ ಜನರು ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇಂದು ದಿವಾಳಿಯಾಗಿದೆ ಎಂದು ಹರಿಹಾಯ್ದರು.ದಾನಶೂರ ಕರ್ಣರಂತೆ ತಮಿಳುನಾಡಿಗೆ ನೀರು ಕೊಟ್ರು ashok.R

ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೋಡಿಯಿಂದ ನೀರಿನ ಸಮಸ್ಯೆ ಆಗಿದೆ. ಇಂತಹ ಕೆಟ್ಟ ಸರ್ಕಾರವನ್ನು ತೊಲಗಿಸಬೇಕಿದೆ. ದೇಶದಲ್ಲಿ ಮೋದಿ ಗ್ಯಾರಂಟಿ ಒಂದೇ. ಕಾಂಗ್ರೆಸ್​ನ ಗ್ಯಾರಂಟಿಗಳು ನೀರಿನ ಮೇಲಿನ ಗುಳ್ಳೆಗಳಿದ್ದಂತೆ. ಸರ್ಕಾರದ ಬಳಿ ಬೋರ್ ವೆಲ್ ಕೊರಿಸುವುದಕ್ಕೂ ಹಣವಿಲ್ಲ. ನಿಮ್ಮ 2000 ರೂಪಾಯಿಯಿಂದ ಏನು ಆಗುತ್ತದೆ ಎಂದು ಗ್ಯಾರಂಟಿ ಯೋಜನೆಯನ್ನು ಟೀಕಿಸಿದರು.

Key words: Water – Tamil Nadu-Water problem – mistake – Congress- R.Ashok