ಮಂಗಳೂರು,ಸೆಪ್ಟಂಬರ್,18,2026 (www.justkannada.in): ಜನರ ಆಶಯಕ್ಕೆ ಸ್ಪಂದಿಸಲು ಕರಾವಳಿಯಲ್ಲಿ ಸಚಿವ ಸಂಪುಟ ಸಭೆ ನಿಗದಿ ಮಾಡಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕರಾವಳಿ ಆರ್ಥಿಕ ಅಭಿವೃದ್ದಿ ಆಗಬೇಕು ಕಲ್ಯಾಣ ಕರ್ನಾಟಕಕ್ಕೆ ಬಂದು ನೀಲನಕ್ಷೆ ಕೊಟ್ಟಿದ್ದಾರೆ. ಆರ್ಥಿಕವಾಗಿ ಮಂಗಳೂರು ಕೊಡುಗೆ ತುಂಬಾ ಇದೆ. ಹಾಗಾಗಿ ಈ ಭಾಗಕ್ಕೂ ವಿಶೇಷ ಆದ್ಯತೆ ಕೊಡಬೇಕಿದೆ ಎಂದರು.
ಜನರ ಆಶಯಕ್ಕೆ ಸ್ಪಂದಿಸಲು ಇಲ್ಲಿ ಸಂಪುಟ ಸಭೆ ನಿಗದಿ ಮಾಡಲಾಗಿದೆ. ಶಾಂತಿ ಇದ್ದರೆ ಸಮೃದ್ದಿಯಿಂದ ಅಭಿವೃದ್ದಿ ಕೆಲಸ ಆಗುತ್ತೆ ಅಭಿವೃದ್ದಿ ಆಗಬಾರದು ಎಂಬುದು ಬಿಜೆಪಿ ಉದ್ದೇಶನಾ? ಸ್ವಾಗತ ಮಾಡಿ ಸಲಹೆ ಕೊಡಿ ಅದು ಬಿಟ್ಟು ಟೀಕೆ ಮಾಡಬೇಡಿ. ನಾವು ಮಾಡುತ್ತಿರೋದು ಏನಾದರೂ ತಪ್ಪಾಗಿದ್ದರೆ ಹೇಳಿ. ಸುಮ್ಮನೆ ಮೋದಿ ಹೆಸರು ಭಜನೆ ಮಾಡಿದ್ರೆ ಹೊಟ್ಟೆ ತುಂಬಲ್ಲ. ಸುಮ್ಮನೇ ಟೀಕೆ ಮಾಡುವವರಿಗೆ ಉತ್ತರ ಕೊಡಲ್ಲ ಎಂದು ವಾಗ್ದಾಳಿ ನಡೆಸಿದರು.
Key words: Cabinet meeting, coastal region, Home Minister, Priyank Kharge







