Tuesday, September 22, 2026

BDA Apartments

ಕೆ.ಆರ್.ಎಸ್ ಹಿನ್ನೀರಿನಲ್ಲಿ‌ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು BDA JK_Adv BDA Adv
Home Crime ಕೆ.ಆರ್.ಎಸ್ ಹಿನ್ನೀರಿನಲ್ಲಿ‌ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು

ಕೆ.ಆರ್.ಎಸ್ ಹಿನ್ನೀರಿನಲ್ಲಿ‌ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು

ಮೈಸೂರು, ಜುಲೈ 16, 2023 (www.justkannada.in): ಕೆ.ಆರ್.ಎಸ್ ಹಿನ್ನೀರಿನಲ್ಲಿ‌ ಮುಳುಗಿ ಮೂವರು ವಿದ್ಯಾರ್ಥಿಗಳ ಸಾವನ್ನಪ್ಪಿದ್ದಾರೆ.

ಮೈಸೂರು ತಾಲೂಕಿನ ಮೀನಾಕ್ಷಿಪುರ ಬಳಿ ಈ ಘಟನೆ ನಡೆದಿದೆ.

ಮೈಸೂರಿನ ಸಂತ ಜೋಸೆಫ್ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಪ್ರವೀಣ್, ವರುಣ್, ಭರತ್ ಮೃತ ವಿದ್ಯಾರ್ಥಿಗಳು. ಇವರು ಮೈಸೂರಿನ ರಾಮಕೃಷ್ಣ ನಗರ, ಪಡುವಾರಹಳ್ಳಿ,, ಶ್ರೀರಂಗಪಟ್ಟಣದ ಬಲ್ಲೇನಹಳ್ಳಿ ವಿದ್ಯಾರ್ಥಿಗಳು.

ನಿನ್ನೆ ಕಾಲೇಜು ಮುಗಿಸಿ ಹಿನ್ನೀರಿಗೆ ಈಜಲು ತೆರಳಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಮೈಸೂರಿನ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.