ಈ ಬಜೆಟ್ ಸಂಪೂರ್ಣ ನಿರಾಶಾದಾಯಕ -ನಾರಾಯಣಗೌಡ ಬೇಸರ….

ಮೈಸೂರು,ಫೆಬ್ರವರಿ,1,2021(www.justkannada.in): ಈ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ. ಈ ಬಾರಿಯ ಬಜೆಟ್ ನಲ್ಲಿ‌ ಕೇಂದ್ರ ಸರ್ಕಾರ ನಮ್ಮನ್ನ ಗಣನೆಗೆ ತೆಗೆದುಕೊಂಡಿಲ್ಲ ಎಂದು ಬಜೆಟ್ ಬಗ್ಗೆ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಯಣಗೌಡ ಬೇಸರ ವ್ಯಕ್ತಪಡಿಸಿದ್ದಾರೆ.jk

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್  ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಯಣ ಗೌಡ, ಈ ಬಜೆಟ್ ಮೇಲೆ ಸಾಕಷ್ಟು ಆಶಾ ಭಾವನೆಗಳನ್ನ ಹೊಂದಿದ್ದವು. ಕರೋನಾ ಹಿನ್ನಲೆ ಕಳೆದ 10 ತಿಂಗಳಿನಿಂದ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದೇವು. ನಮ್ಮ ಸೆಕ್ಟರ್ ಗಳಿಗೆ ಹೆಚ್ಚಿನ ರಿಯಾಯಿತಿ ಜೊತೆಗೆ, ಮೂರು ವರ್ಷಗಳ ಕಾಲದ ಜಿಎಸ್ ಟಿ ರಿಯಾಯಿತಿ ನಿರೀಕ್ಷೆಯಲ್ಲಿದ್ದೇವು. ಕಟ್ಟಡ ತೆರಿಗೆಯಲ್ಲಿ ಅನುದಾನದ ಮೂಲಕ ರಿಯಾಯಿತಿ ನೀಡುವ ಭರವಸೆಯಲ್ಲಿದ್ದೇವು. ಆ ಭರವಸೆ ಈಡೇರಿಲ್ಲ  ಎಂದರು.This budget -complete –disappointment -Mysore District Hotel Owners Association- Narayana Gowda

ಉದ್ಯಮಕ್ಕೆ ಸಂಭಂದಪಟ್ಟಂತೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಕೇಂದ್ರ ಸರ್ಕಾರ ನಮ್ಮನ್ನ ಪರಿಗಣಿಸಿಲ್ಲ ಅನ್ನಿಸುತ್ತಿದೆ. ಈ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನಲೆ ಮೈಸೂರಿಗೆ ಚಿತ್ರನಗರಿ ಸೇರಿದಂತೆ ಹಲವು ಹೊಸ ಕೊಡುಗೆ ನಿರೀಕ್ಷೆಯಿತ್ತು. ನಮ್ಮೆಲ್ಲ ನಿರೀಕ್ಷೆಗಳು ಹುಸಿಯಾಗಿದೆ ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ನಾರಯಣಗೌಡ  ಟೀಕಿಸಿದ್ಧಾರೆ.

Key words: This budget -complete –disappointment -Mysore District Hotel Owners Association- Narayana Gowda