ತಂತ್ರಜ್ಞಾನದಲ್ಲಿ ಭಾರತ ನಂ.1 ಸ್ಥಾನ ತಲುಪಲು ಸಂಕಲ್ಪ- ಕೇಂದ್ರ ಗೃಹ ಸಚಿವ ಅಮಿತ್ ಶಾ.

ಹುಬ್ಬಳ್ಳಿ,ಜನವರಿ,28,2023(www.justkannada.in): ತಂತ್ರಜ್ಞಾನದಲ್ಲಿ ಭಾರತ ನಂ.1 ಆಗಬೇಕು. ಟೆಕ್ನಾಲಜಿಯಲ್ಲಿ ಭಾರತ ಪ್ರಥಮ ಸ್ಥಾನ ತಲುಪುವುದು ವಿದ್ಯಾರ್ಥಿಗಳ ಕೈಯಲ್ಲಿದೆ. ಇದಕ್ಕಾಗಿ ಸಂಕಲ್ಪ ಮಾಡೋಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ,  ಸಿಎಂ ಬೊಮ್ಮಾಯಿಗೆ ಜನ್ಮದಿನದ ಶುಭಾಶಯ ತಿಳಿಸಿದರು.  ಬಿವಿಬಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ ಕೆಎಲ್ ಇ ಬಹಳ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿದೆ. ಕೆಎಲ್ ಇ ಸಂಸ್ಥೆಯನ್ನ ನಿಸ್ವಾರ್ಥತೆಯಿಂದ ಸ್ಥಾಪಿಸಲಾಗಿದೆ. ಕೆಎಲ್ ಇಯಲ್ಲಿ ಓದುತ್ತಿರುವುದಕ್ಕೆ ಹೆಮ್ಮೆ ಇರಬೇಕು.  ಐವರು ಶಿಕ್ಷಕರಿಂದ ಸ್ಥಾಪಿತವಾದ ಸಂಸ್ಥೆ ಇದು.  ಶಿಕ್ಷಣ ವ್ಯವಸ್ಥೆ ಇಂದು ವ್ಯಾಪಾರೀಕರಣವಾಗಿದೆ  ಇಂತಹ ಪರಿಸ್ಥಿತಿಯಲ್ಲೂ ಸಂಸ್ಥೆ ಬಡವರಿಗೆ ಶಿಕ್ಷಣ ನೀಡುತ್ತಿದೆ. 25 ಕೋಟಿ ವೆಚ್ಚದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರು.

ವಿಶ್ವದೆದುರು ಭಾರತವನ್ನ ನಾಯಕ ಸ್ಥಾನದಲ್ಲಿ ನಿಲ್ಲಿಸಲಾಗಿದೆ.   ಇಡೀ ವಿಶ್ವಕ್ಕೆ ಭಾರತದ ಶಕ್ತಿ ತೋರಿಸಬೇಕಿದೆ.  ಮಹಾನ್ ಭಾರತದ ಕನಸನ್ನ ಯುವಜನತೆ ನನಸು ಮಾಡಬೇಕು. ಟೆಕ್ನಾಲಜಿಯಲ್ಲಿ ಭಾರತವನ್ನ ನಂ1 ಆಗಬೇಕು. ಅದನ್ನ ಮಾಡುವುದು  ವಿದ್ಯಾರ್ಥಿಗಳ ಕೈಯಲ್ಲಿದೆ. ಸ್ವಾತಂತ್ರ ಹೋರಾಟಗಾರರ ಕನಸು ನನಸು ಮಾಡಬೇಕಿದೆ.  2014ರಲ್ಲಿ ದೇಶದಲ್ಲಿ ಮಹತ್ವದ ಪರಿವರ್ತನೆಯಾಯಿತು. ಕೇವಲ 8 ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿಯಾಗಿದೆ ಎಂದು ಅಮಿತ್ ಶಾ ನುಡಿದರು.

Key words: Union Home Minister -Amit Shah – reach- India’s -No. 1 position – technology.